ಇಂಟು ಮಾರ್ಕ್, ರೈಟ್ ಮಾರ್ಕ್ ಹಾಕಿದ್ದರಿಂದ ಮತಗಳು ಅಸಿಂಧುಗೊಂಡಿವೆ. ವ್ಹಿಪ್ ಗೌರವಿಸಿ ಮತ ಹಾಕಿದ್ದೇವೇಂದು  ಶಾಸಕರು ತಿಳಿಸಿದ್ದಾರೆ.

ಬೆಂಗಳೂರು(ಮಾ.23): ಇಂದು ನಡೆದ ರಾಜ್ಯಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಚಲಾಯಿಸಿದ ಇಬ್ಬರು ಜೆಡಿಎಸ್ ಮತಗಳು ಅಸಿಂಧುಗೊಂಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

4 ಮತಗಳು ಅಸಿಂಧುಗೊಂಡಿದ್ದು, ಇದರಲ್ಲಿ ಕೇಂದ್ರ ಚುನಾವಣಾ ಆಯೋಗ ಬಾಬೂರಾವ್ ಚಿಂಚನಸೂರ್, ಕಾಗೋಡು ತಿಮ್ಮಪ್ಪ ಮತಗಳನ್ನು ಅಸಿಂಧುಗೊಳಿಸಿತ್ತು. ಜೆಡಿಎಸ್'ನ ಬಂಡಾಯ ಶಾಸಕರಾದ ಚಲುವರಾಯಸ್ವಾಮಿ ಹಾಗೂ ಹೆಚ್.ಸಿ. ಬಾಲಕೃಷ್ಣ ಮತಗಳು ಅಸಿಂಧುಗೊಂಡಿವೆ.

ಇಂಟು ಮಾರ್ಕ್, ರೈಟ್ ಮಾರ್ಕ್ ಹಾಕಿದ್ದರಿಂದ ಮತಗಳು ಅಸಿಂಧುಗೊಂಡಿವೆ. ವ್ಹಿಪ್ ಗೌರವಿಸಿ ಮತ ಹಾಕಿದ್ದೇವೇಂದು ಶಾಸಕರು ತಿಳಿಸಿದ್ದಾರೆ.