ಚುನಾವಣೆಗೂ ಮುನ್ನ ಜೆಡಿಎಸ್ ಶಾಸಕರಿಂದ ಆಮೀಷ; ಶಾಸಕ ಸುರೇಶ್ ಬಾಬುಯಿಂದ ಮಹಿಳೆಯರಿಗೆ ಕುಕ್ಕರ್ ಭಾಗ್ಯ

First Published 12, Feb 2018, 12:19 PM IST
JDS MLA Suresh Babu Offer Cooker to women due to Election Gimmick
Highlights

 ತುಮಕೂರಿನಲ್ಲಿ ಚುನಾವಣಾ ಕಾವು ತುಂಬಾ ಜೋರಾಗಿದೆ. ಚಿಕ್ಕನಾಯಕನಹಳ್ಳಿ  ಕ್ಷೇತ್ರದ ಜೆಡಿಎಸ್  ಶಾಸಕ ಸುರೇಶ್ ಬಾಬು ಕ್ಷೇತ್ರದ ಮಹಿಳೆಯರಿಗೆ ಕುಕ್ಕರ್ ಭಾಗ್ಯದ ಆಮಿಷ ಒಡ್ಡಿದ್ದಾರೆ.

ತುಮಕೂರು (ಫೆ.12): ತುಮಕೂರಿನಲ್ಲಿ ಚುನಾವಣಾ ಕಾವು ತುಂಬಾ ಜೋರಾಗಿದೆ. ಚಿಕ್ಕನಾಯಕನಹಳ್ಳಿ  ಕ್ಷೇತ್ರದ ಜೆಡಿಎಸ್  ಶಾಸಕ ಸುರೇಶ್ ಬಾಬು ಕ್ಷೇತ್ರದ ಮಹಿಳೆಯರಿಗೆ ಕುಕ್ಕರ್ ಭಾಗ್ಯದ ಆಮಿಷ ಒಡ್ಡಿದ್ದಾರೆ.

ಚಿಕ್ಕನಾಯಕನಹಳ್ಳಿ ಪಟ್ಟಣದ ದೇಶಿಯ ವಿದ್ಯಾಪೀಠ ಶಾಲಾ ಆವರಣದಲ್ಲಿ ಮಹಿಳೆಯರಿಗೆ ಕುಕ್ಕರ್ ಹಂಚಿಕೆ ಮಾಡಲಾಗಿದ್ದು, ಮಹಿಳೆಯರು ಕುಕ್ಕರ್ ತೆಗೆದುಕೊಂಡು ಹೋಗುವ ಎಕ್ಸ್​ಕ್ಲೂಸಿವ್ ದೃಶ್ಯಗಳು ಸುವರ್ಣನ್ಯೂಸ್​ಗೆ ಲಭ್ಯವಾಗಿವೆ. ವಿಶ್ವ ಮಹಿಳಾ ದಿನಾಚರಣೆ ನೆಪದಲ್ಲಿ ಮಹಿಳೆಯರಿಗೆ ಕುಕ್ಕರ್ ಹಂಚಿಕೆ ಮಾಡಿರುವ JDS ಶಾಸಕ  ಸುರೇಶ್ ಬಾಬು ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
 

loader