ರಾಮಚಂದ್ರಗೆ ಟಿಕೆಟ್ ನೀಡಲು ಜೆಡಿಎಸ್ ಮುಖಂಡರ ವಿರೋಧ

First Published 11, Apr 2018, 4:15 PM IST
JDS Leader Prakash Wants To RR Nagar Ticket
Highlights

ರಾಜರಾಜೇಶ್ವರಿ ನಗರದ ಬಿಜೆಪಿ ಟಿಕೆಟ್ ವಂಚಿತ ರಾಮಚಂದ್ರಗೆ ಜೆಡಿಎಸ್ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು : ರಾಜರಾಜೇಶ್ವರಿ ನಗರದ ಬಿಜೆಪಿ ಟಿಕೆಟ್ ವಂಚಿತ ರಾಮಚಂದ್ರಗೆ ಜೆಡಿಎಸ್ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಜೆಡಿಎಸ್ ಬೆಂಗಳೂರು ಘಟಕದ ಅಧ್ಯಕ್ಷ, ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಪ್ರಕಾಶ್’ ರಾಮಚಂದ್ರಗೆ ಟಿಕೆಟ್ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ರಾಮಚಂದ್ರಗೆ ಟಿಕೆಟ್ ನೀಡುವುದನ್ನು ತಾವು ಯಾವುದೇ ಕಾರಣಕ್ಕೂ ಕೂಡ ಒಪ್ಪಲ್ಲ. ರಾಮಚಂದ್ರ ಗೆಲ್ಲುವ ಕುದುರೆ ಅಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುವುದಾದರೆ ತ್ಯಾಗ ಮಾಡುವೆ.  ಆದರೆ ರಾಮಚಂದ್ರಗೆ ಟಿಕೆಟ್ ನೀಡುವುದಾದರೆ ನನ್ನ ವಿರೋಧವಿದೆ ಎಂದು ಅವರು ಹೇಳಿದ್ದಾರೆ.

ನಾಳೆ ಪಕ್ಷದ ಕಾರ್ಯಕರ್ತರ ಸಭೆಯನ್ನು ನಡೆಸುತ್ತೇನೆ. ಕಾರ್ಯಕರ್ತರ ಅಭಿಪ್ರಾಯ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರಿಗೆ ತಿಳಿಸುವೆ.  ಪಕ್ಷದ ಯಾವುದೇ ಕಾರ್ಯಕರ್ತರಿಗೆ ಬೇಕಾದರೂ ಟಿಕೆಟ್ ನೀಡಲಿ.

ಆದರೆ ಬಿಜೆಪಿ ಟಿಕೆಟ್ ಸಿಕ್ಕದೇ ಬರಲು ಮುಂದಾಗಿರುವ ರಾಮಚಂದ್ರ ಗೆ ಟಿಕೆಟ್ ನೀಡುವುದು ಮಾತ್ರ ಬೇಡ ಎಂದು  ಪಕ್ಷದ ಮುಖಂಡರ ಬಳಿ ರಾಜರಾಜೇಶ್ವರಿ ನಗರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಪ್ರಕಾಶ್ ನೋವು ತೋಡಿಕೊಂಡಿದ್ದಾರೆ.

loader