ಜೆಡಿಎಸ್ ಮುಖಂಡ ಎಚ್ ವಿಶ್ವನಾಥ್ ಸರ್ಕಾರ ಈ ನಿರ್ಧಾರಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಬಜೆಟ್ ನಲ್ಲಿ  ತೈಲ ದರ ಏರಿಕೆ ಬಗ್ಗೆ ಮಾತನಾಡಿ ಇದರಿಂದ ಸಾಮಾನ್ಯ ಜನತೆ ಮೇಲೆ ಪರಿಣಾಮ ಉಂಟಾಗಲಿದೆ ಎಂದರು. 

ಬೆಂಗಳೂರು :  ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಏರಿಕೆ ಮಾಡುವ ನಿರ್ಧಾರವನ್ನು ವಾಪಸ್ ಪಡೆಯುವಂತೆ ಆಡಳಿತಾರೂಢ ಜೆಡಿಎಸ್‌ನ ಹಿರಿಯ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ. ಮಂಗಳವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಬಜೆಟ್‌ನಲ್ಲಿ ಸಿಹಿ ಮತ್ತು ಕಹಿ ಎರಡೂ ಇದೆ ಎಂದು ಮಾರ್ಮಿಕವಾಗಿ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಖ್ಯಮಂತ್ರಿಗಳು ತಮ್ಮ ಬಜೆಟ್‌ನಲ್ಲಿ ತೈಲದ ಮೇಲಿನ ಕರಭಾರ ಹೆಚ್ಚಿಸುವ ತೀರ್ಮಾನ ಪ್ರಕಟಿಸಿದ್ದಾರೆ. ಆದರೆ, ಇದರಿಂದ ಶ್ರೀಸಾಮಾನ್ಯನ ಜನಜೀವನ ದುಸ್ತರವಾಗಲಿದೆ. ಆತನ ಮೇಲಿನ ಈ ಭಾರ ಕಡಮೆಗೊಳಿಸಬೇಕು. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಸಿಎಂ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಕುಮಾರಸ್ವಾಮಿ ಚೊಚ್ಚಲ ಬಜೆಟ್‌ನಲ್ಲಿ ಹಲ ವಾರು ಉತ್ತಮ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಮೆಟ್ರೋ ರೈಲು ವಿಸ್ತರಣೆ, 6 ಎಲಿವೇ ಟೆಡ್ ರಸ್ತೆಗಳ ನಿರ್ಮಾಣ, ಬಡಮಕ್ಕಳಿಗೆ ಅನುಕೂಲವಾಗಲಿರುವ ಬೋನ್‌ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್‌ಗೆ ಅನುದಾನ ಒದಗಿಸಿರುವುದು ಉತ್ತಮವಾದದ್ದು ಎಂದರು.