2 ವಿಧಾನಸಭಾ ಮತ್ತು 3 ಲೋಕಸಭಾ ಉಪಚುನಾವಣೆಗೆ ಕೊನೆಗೂ ಜೆಡಿಎಸ್ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಹಾಗಾದ್ರೆ ಯಾವ ಕ್ಷೇತ್ರಕ್ಕೆ ಯಾರು?  ಪಟ್ಟಿ ಈ ಕೆಳಗಿನಂತಿದೆ.

ಬೆಂಗಳೂರು, [ಅ.23]: 2 ವಿಧಾನಸಭಾ ಮತ್ತು 3 ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗಾಗಿ ಜೆಡಿಎಸ್‌ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಪಚುನಾವಣೆಯಲ್ಲಿ ಪಕ್ಷದ ಯಾವುದೇ ಸಚಿವರನ್ನು ಉಸ್ತುವಾರಿಗೆ ಮಣೆ ಹಾಕದೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಹಾಲಿ, ಮಾಜಿ ಸದಸ್ಯರಿಗೆ ಜವಾಬ್ದಾರಿ ನೀಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರು ಕ್ಷೇತ್ರಗಳ ಹೊಣೆಗಾರಿಕೆಯನ್ನು ಹಂಚಿಕೆ ಮಾಡಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಸ್ಪರ್ಧಿಸಿರುವ ಕ್ಷೇತ್ರಕ್ಕೆ ಇಬ್ಬರನ್ನು ಮತ್ತು ಜೆಡಿಎಸ್‌ ಅಭ್ಯರ್ಥಿಗಳ ಕ್ಷೇತ್ರಕ್ಕೆ ಐವರನ್ನು ನಿಯೋಜಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಯಾವುದೇ ಸಚಿವರಿಗೆ ಉಸ್ತುವಾರಿ ನೀಡಿಲ್ಲ. ಹಾಗಾದ್ರೆ ಯಾರನ್ನ ಯಾವ ಕ್ಷೇತ್ರಕ್ಕೆ? ಇಲ್ಲಿದೆ ಪಟ್ಟಿ.

ಉಪ ಚುನಾವಣೆ ಸಮರ: ಕಾಂಗ್ರೆಸ್‌ಗೆ ಇರೋ ಆಸಕ್ತಿ ಜೆಡಿಎಸ್‌ಗಿಲ್ಲ ಯಾಕೆ?

ರಾಮನಗರ ವಿಧಾನಸಭೆ ಕ್ಷೇತ್ರ: ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್‌.ಸಿಂಧ್ಯಾ, ಮಾಜಿ ಶಾಸಕ ಸಿ.ಬಿ.ಸುರೇಶ್‌ ಬಾಬು, ವಿಧಾನಪರಿಷತ್‌ ಸದಸ್ಯ ಬೋಜೇಗೌಡ, ಶಾಸಕ ಕೆ.ಗೋಪಾಲಯ್ಯ, ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಆರ್‌.ಪ್ರಕಾಶ್‌ ಅವರನ್ನು ನೇಮಕ ಮಾಡಲಾಗಿದೆ. 

ಜಮಖಂಡಿ ವಿಧಾನಸಭಾ ಕ್ಷೇತ್ರ: ಮಾಜಿ ಶಾಸಕರಾದ ಕೋನರೆಡ್ಡಿ ಮತ್ತು ಎಚ್‌.ಎಸ್‌.ಶಿವಶಂಕರ್‌ ಅವರನ್ನು ನಿಯೋಜಿಸಲಾಗಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರ: ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ, ಶಾಸಕ ರಾಜ ವೆಂಕಟಪ್ಪ ನಾಯಕ ಚುನಾವಣಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. 

ಮಂಡ್ಯ ಲೋಕಸಭಾ ಕ್ಷೇತ್ರ: ವಿಧಾನ ಪರಿಷತ್‌ ಸದಸ್ಯರಾದ ಶ್ರೀಕಂಠೇಗೌಡ, ಎನ್‌. ಅಪ್ಪಾಜಿ ಗೌಡ, ಕೆ.ವಿ.ನಾರಾಯಣ ಸ್ವಾಮಿ, ಟಿ.ಎ.ಶರವಣ ಮತ್ತು ಜೆಡಿಎಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫುರಲ್ಲಾ ಖಾನ್‌ ಅವರನ್ನು ಚುನಾವಣಾ ಉಸ್ತುವಾರಿಯಾಗಿ ನಿಯೋಜಿಸಲಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ: ವಿಧಾನಪರಿಷತ್‌ ಸದಸ್ಯರಾದ ಬಿ.ಎಂ.ಫಾರೂಖ್‌, ಕಾಂತರಾಜು, ಮಾಜಿ ಶಾಸಕರಾದ ವೈ.ಎಸ್‌.ವಿ.ದತ್ತ, ಕೋನರೆಡ್ಡಿ, ಮಾಜಿ ಸಚಿವ ಸಚಿವ ಬಿ.ಬಿ.ನಿಂಗಯ್ಯ ಅವರನ್ನು ನೇಮಕ ಮಾಡಲಾಗಿದೆ.

ಇದೇ ನವೆಂಬರ್ 03ರಂದು 5 ಉಪಚುನಾವಣೆಗಳಿಗೆ ಮತದಾನ ನಡೆಯಲಿದ್ದು, ನವೆಂಬರ್ 06ರಂದು ಮತ ಫೊಲಿತಾಂಶ ಹೊರಬೀಳಲಿದೆ.