ರಾಜೀನಾಮೆ ಪರ್ವದಿಂದ ತಲೆ ಕೆಡಿಸಿಕೊಂಡಿರುವ ದೋಸ್ತಿ ನಾಯಕರು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಹಾಗಾದರೆ ಸಭೆಯಲ್ಲಿ ಏನಾಗುತ್ತಿದೆ ಎಂಬುದು ನಿಜಕ್ಕೂ ಬಹಳ ಕುತುಹಲಕಾರಿ ವಿಚಾರ. 

ಬೆಂಗಳೂರು[ ಜು. 07] ಶನಿವಾರ ಆರಂಭವಾದ ರಾಜೀನಾಮೆ ಪರ್ವ ತಾತ್ಕಾಲಿಕ ಬ್ರೇಕ್ ಪಡೆದುಕೊಂಡಿದ್ದರೂ ಸೋಮವಾರ ಮತ್ತೆ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೆರಿಕ ಪ್ರವಾಸದಲ್ಲಿದ್ದ ಸಿಎಂ ಕುಮಾರಸ್ವಾಮಿ ಆಗಮಿಸಿದ್ದು ಡ್ಯಾಮೇಜ್ ಕಂಟ್ರೋಲ್ ಗೆ ಇರುವ ತಂತ್ರಗಳನ್ನು ಮೊದಲು ಹುಡುಕುತ್ತಿದ್ದಾರೆ. ಕುಮಾರಸ್ವಾಮಿ ವಿಮಾನ ನಿಲ್ದಾಣದಿಂದ ಬಂದವರೆ ತಕ್ಷಣ ಸಭೆ ಮೇಲೆ ಸಭೆ ಆರಂಭಿಸಿದರು.

ಮುಂಬೈನಿಂದ ಸೋಮಶೇಖರ್ ಕೊಟ್ಟ ಏಟಿಗೆ ಥರಗುಟ್ಟಿ ಹೋದ ದೋಸ್ತಿ ನಾಯಕರು

ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ಪರಮೇಶ್ವರ ಸೇರಿದಂತೆ ಎಲ್ಲ ಪ್ರಮುಖರು ಅತೃಪ್ತರ ಸವಾಲು ಮೆಟ್ಟಿ ನಿಲ್ಲಲು ಏನು ಮಾಡಬೇಕು ಎಂದು ಚರ್ಚೆ ನಡೆಸಿದರು. ಆದರೆ ಅಂತಿಮವಾಗಿ ಜೆಡಿಎಸ್ -ಕಾಂಗ್ರೆಸ್ ಸಭೆ ಅಪೂರ್ಣವಾಗಿದ್ದು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸೋಮವಾರ ಬೆಳಗ್ಗೆ ಮತ್ತೆ ರಾಜಕೀಯ ಹೈಡ್ರಾಮಾ ಮುಂದುವರಿಯಲಿದ್ದು ಇದೀಗ ರಾಜಕೀಯ ಹೈಡ್ರಾಮಾಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.