ಬೆಂಗಳೂರು/ ಮುಂಬೈ[ಜು. 07]  ನಾವು ಸಿಎಂ ಬದಲಾಬವಣೆ ಬೇಡಿಕೆಯನ್ನು ಇಟ್ಟಿರಲಿಲ್ಲ. ಮಂತ್ರಿಗಿರಿಯೂ ಬೇಕಿಲ್ಲ. ನಾವು 10 ಶಾಸಕರು ಒಂದಾಗಿದ್ದೇವೆ. ರಾಜೀನಾಮೆ ಹಿಂದಕ್ಕೆ ಪಡೆಯುವ ಮಾತೆ ಇಲ್ಲ ಎಂದು ಕಡ್ಡಿ ತುಂಡುಮಾಡಿದಂತೆ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಮುಂಬೈನಿಂದ ಹೇಳಿದ್ದಾರೆ.

ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಅತೃಪ್ತ ಶಾಸಕರ ಪ್ರತಿನಿಧಿಯಾಗಿ ಸೋಮಶೇಖರ್ ಮಾತನಾಡಿದರು. ಮುನಿರತ್ನ ಮತ್ತು ಆನಂದ್ ಸಿಂಗ್ ಸಹ ಸೋಮವಾರ ತಮ್ಮ ಜತೆ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.

ಬೆಂಗಳೂರಿಗೆ ಬಂದಿಳಿದ ಸಿಎಂ HDK ಮುಂದಿರುವ ಕೊನೆಯ 4 ಆಯ್ಕೆ

ಮಾಧ್ಯಮಗಳ ಮೂಲಕ ಈ ಮಾಹಿತಿ ದೋಸ್ತಿ ನಾಯಕರಿಗೆ ರವಾನೆಯಾಗಿದ್ದು ಅನಿವಾರ್ಯವಾಗಿ ಎಚ್ ಡಿ ಕುಮಾರಸ್ವಾಮಿ ಮತ್ತು ಪರಮೇಶ್ವರ ತಮ್ಮ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕಾಗುತ್ತದೆ.