ಇಟಾನಗರ (ಮಾ. 19): ಮುಂಬರುವ ಅರುಣಾಚಲಪ್ರದೇಶ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಸಂಬಂಧ ಜೆಡಿಎಸ್‌ ತನ್ನ ಮೊದಲ ಪಟ್ಟಿ ಪ್ರಕಟಿಸಿದೆ.

ಸಾಲಿನಲ್ಲಿ ನಿಲ್ಲಬೇಕಾಗಿಲ್ಲ!: ಗುಜರಾತ್ ನಲ್ಲಿ ಒಬ್ಬ ಮತದಾರನಿಗೆ 1 ಮತಗಟ್ಟೆ!

ಮೊದಲ ಪಟ್ಟಿಯಲ್ಲಿ ವಿಧಾನಸಭೆಯ 11 ಮತ್ತು 2 ಲೋಕಸಭಾ ಕ್ಷೇತ್ರಗಳ ಪೈಕಿ 1 ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿಪ್ರಕಟಿಸಲಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್‌ ತನ್ನ ಅದೃಷ್ಟಪರೀಕ್ಷೆಗೆ ಇಳಿದಿದೆ.

ಸಿಎಂ ಹುದ್ದೆಯಲ್ಲಿದ್ದಾಗಲೇ ನಿಧನರಾದ 17ನೇ ವ್ಯಕ್ತಿ ಮನೋಹರ್‌ ಪರ್ರಿಕರ್‌

ಅರುಣಾಚಲದ ಮಾಜಿ ಸಿಎಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಜೆಡಿಎಸ್‌ ಉಸ್ತುವಾರಿಯಾಗಿರುವ ಗೆಗಾಂಗ್‌ ಅಪಾಂಗ್‌ ಟುಟಿಂಗ್‌- ಯಿಂಗ್‌ಕಿಯೋಂಗ್‌ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ. 60 ಸದಸ್ಯ ಬಲದ ವಿಧಾನಸಭೆ ಮತ್ತು 2 ಲೋಕಸಭಾ ಕ್ಷೇತ್ರಗಳಿಗೆ ಏ.11ರಂದು ಚುನಾವಣೆ ನಡೆಯಲಿದೆ.