ನವದೆಹಲಿ (ಮಾ. 19): ಮನೋಹರ್‌ ಪರ್ರಿಕರ್‌ (63) ಸಿಎಂ ಹುದ್ದೆಯಲ್ಲಿದ್ದಾಗಲೇ ಸಾವನ್ನಪ್ಪಿದ ದೇಶದ 17ನೇ ಹಾಗೂ ಗೋವಾದ 2ನೇ ಮುಖ್ಯಮಂತ್ರಿ.

ಈ ಹಿಂದೆ 1973ರ ಅಗಸ್ಟ್‌ನಲ್ಲಿ ಗೋವಾದ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ (ಎಂಜಿಪಿ) ಸಿಎಂ ಆಗಿದ್ದ ದಯಾನಂದ ಬಂಡೋಕರ ಹುದ್ದೆಯಲ್ಲಿದ್ದಾಗಲೇ ಮೃತಪಟ್ಟಿದ್ದರು. ತಮಿಳುನಾಡಿನ ಸಿಎಂಗಳಾದ ಅಣ್ಣಾದೊರೈ, ಎಂ.ಜಿ.ರಾಮಚಂದ್ರನ್‌ ಮತ್ತು ಜಯಲಲಿತಾ ಅಧಿಕಾರದಲ್ಲಿದ್ದಾಗಲೇ ಸಾವನ್ನಪ್ಪಿದ್ದರು.

ಇನ್ನು ಜಮ್ಮು-ಕಾಶ್ಮೀರ ಸಿಎಂ ಆಗಿದ್ದ ಶೇಖ್‌ ಅಬ್ದುಲ್ಲಾ ಮತ್ತು ಮುಫ್ತಿ ಮೊಹಮ್ಮದ್‌ ಇದೇ ರೀತಿ ಸಾವನ್ನಪ್ಪಿದ್ದರು. ಗುಜರಾತ್‌ ಸಿಎಂಗಳಾಗಿದ್ದ ಬಲವಂತರಾಯ್‌ ಮೆಹ್ತಾ ಮತ್ತು ಚಿಮನ್‌ಭಾಯ್‌ ಪಟೇಲ್‌ ಕೂಡಾ ಅಧಿಕಾರಾವಧಿಯಲ್ಲೇ ಸಾವನ್ನಪ್ಪಿದ್ದರು.

ಅದೇ ರೀತಿ ಆಂಧ್ರದ ಸಿಎಂ ವೈ.ಎಸ್‌.ರಾಜಶೇಖರ ರೆಡ್ಡಿ, ಅರುಣಾಚಲಪ್ರದೇಶ ಸಿಎಂ ದೋರ್ಜಿ ಖಂಡು, ಪಂಜಾಬ್‌ ಸಿಎಂ ಬೇಅಂತ್‌ಸಿಂಗ್‌, ಮಹಾರಾಷ್ಟ್ರದ ಮಾರುತ್‌ರಾವ್‌ ಕಣ್ಣಂವರ್‌, ಪಶ್ಚಿಮ ಬಂಗಾಳದ ಬಿದನ್‌ ಚಂದ್ರ ರಾಯ್‌, ರಾಜಸ್ಥಾನ ಬರ್ಕತುಲ್ಲಾ ಖಾನ್‌, ಬಿಹಾರದ ಕೃಷ್ಣಾ ಸಿಂಗ್‌, ಕೇಂದ್ರಾಡಳಿತ ಪ್ರದೇಶದ ರವಿಶಂಕರ ಶುಕ್ಲಾ, ಅಸ್ಸಾಂನ ಗೋಪಿನಾಥ್‌ ಬರ್ಡೋಲಿ ಸಿಎಂ ಹುದ್ದೆಯಲ್ಲಿದ್ದಾಗಲೇ ಮೃತಪಟ್ಟವರು.