ನೋಟಾ ಜಾರಿಗೆ ಬಂದಿದ್ದು 2013ರಲ್ಲಿ

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ ಯಾರಿಗೂ ಮತ ಹಾಕಲು ಇಷ್ಟವಿಲ್ಲದ ಜನರಿಗೆ ‘ನೋಟಾ’ ಆಯ್ಕೆ ಯನ್ನು 2013ರಲ್ಲಿ ಸುಪ್ರೀಂಕೋರ್ಟ್ ಒದಗಿಸಿತು. ಅದೇ ವರ್ಷ ನಡೆದ ಛತ್ತೀಸ್‌ಗಢ ಚುನಾವಣೆಯಲ್ಲಿ ಮೊದಲು ಅನುಷ್ಠಾನವಾಯಿತು. ನೋಟಾಗೆ ೨೦೧೫ರಲ್ಲಿ ಪ್ರತ್ಯೇಕ ಚಿಹ್ನೆಯೂ ಲಭ್ಯವಾಯಿತು.

25.8 ಲಕ್ಷ ಮತ ಪೆಟ್ಟಿಗೆ

1951-52ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ 1874 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಿಗಾಗಿ ದೇಶಾದ್ಯಂತ 25.8 ಲಕ್ಷ ಮತ ಪೆಟ್ಟಿಗೆಗಳನ್ನು ಬಳಸಲಾಗಿತ್ತು.