ನಟ ಅಂಬರೀಶ್ ಅವರ ಸ್ನೇಹಿತರು ಆಗಿದ್ದ ಜಯದೇವ ಆಸ್ಪತ್ರೆ ವೈದ್ಯ ಡಾ.ಮಂಜುನಾಥ್ ಅಂಬರೀಶ್ ಅವರ ಬಗ್ಗೆ ಸೀಕ್ರೇಟ್ ಒಂದನ್ನು ಬಿಚ್ಚಿಟ್ಟಿದ್ದಾರೆ. 

ಬೆಂಗಳೂರು : ಅಂಬರೀಷ್ ಅವರನ್ನ ನಾನು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿರುವಾಗಲಿಂದಲೂ ಬಲ್ಲೆ. ಆವಾಗ ಅವರು ಬಹುಶಃ ಚಿತ್ರರಂಗದಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿರಲಿಲ್ಲ ಎಂದು ಜಯದೇವ ಆಸ್ಪತ್ರೆ ವೈದ್ಯ ಡಾ.ಮಂಜುನಾಥ್ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಣ್ಣಪುಟ್ಟ ಸೈಡ್ ರೋಲ್ಸ್ ಮಾಡ್ತಾ ಇದ್ರು. ಆಗ ನಾವು ಮೆಡಿಕಲ್ ಕಾಲೇಜಿನಲ್ಲಿದ್ದಾಗ ಹಾಸ್ಟೆಲಿನಲ್ಲಿ ಇದ್ವಿ. ಒಂದ್ ಸಲ ಅಂಬರೀಷ್ ಅವ್ರ ಗಂಟಲು ನೋವು, ಜ್ವರ, ಎದೆನೋವು ಅಂತ ದೀಪಕ್ ನರ್ಸಿಂಗ್ ಹೋಮ್‌ಗೆ ಅಡ್ಮಿಟ್ ಆಗಿದ್ರು. ಅಂತಹ ಸಂದರ್ಭದಲ್ಲಿ ನನ್ನನ್ನೂ ಕರೆದಿದ್ರು ನೋಡ್ಲಿಕ್ಕೆ. 

ಸಿನಿಮಾದಲ್ಲಿ ಫೈಟ್ ಮಾಡ್ತಿದ್ದ ಅವರು ಆಸ್ಪತ್ರೆಗೆ ರೋಗಿಯಾಗಿ ಆಸ್ಪತ್ರೆಗೆ ಬಂದ ಸಮಯದಲ್ಲಿ ಒಂದು ಸಣ್ಣ ಇಂಜೆಕ್ಷನ್ ಕಂಡ್ರೆ ಹೆದರ್ಕೊಳೋರು. ಅವರ ಹೃದಯ ಮಗುವಿನಂತೆ ಇತ್ತು ಎಂದು ಜಯದೇವ ಆಸ್ಪತ್ರೆ ವೈದ್ಯ ಡಾ.ಮಂಜುನಾಥ್ ಹೇಳಿದ್ದಾರೆ.