ಭಾರತದಂತೆ ಅಮೆರಿಕಾದಲ್ಲಿ LPG ಸಿಲಿಂಡರ್ ಬಳಸಲ್ಲ! ಹಾಗಾದ್ರೆ ಅಡುಗೆ ಮಾಡೋದು ಹೇಗೆ?
ಭಾರತದಲ್ಲಿ ನಾವು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಟೆನ್ಷನ್‌ನಲ್ಲಿರುತ್ತೇವೆ. ಆದರೆ ಅಮೆರಿಕದಲ್ಲಿ ಈ ಚಿಂತೆಯೇ ಇಲ್ಲವಂತೆ. ಅಲ್ಲಿನ ಜನ ಸಿಲಿಂಡರ್‌ಗಳನ್ನೇ ನೋಡುವುದಿಲ್ಲವಂತೆ. ಹಾಗಿದ್ರೆ, ಅವರ ಮನೆಗಳಿಗೆ ಗ್ಯಾಸ್ ಹೇಗೆ ಪೂರೈಕೆಯಾಗುತ್ತದೆ? ಈ ಕುತೂಹಲಕಾರಿ ಮಾಹಿತಿ ಇಲ್ಲಿದೆ.
13

Image Credit : ChatGpt
ಅಮೆರಿಕನ್ರಿಗೆ ಗ್ಯಾಸ್ ಸಮಸ್ಯೆ ಇಲ್ವಾ?
ಭಾರತದಲ್ಲಿ ಗ್ಯಾಸ್ ಸಿಲಿಂಡರ್‌ಗಾಗಿ ನಾವು ಪರದಾಡುತ್ತೇವೆ. ಆದರೆ ಅಮೆರಿಕದಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನ. ಅಲ್ಲಿನ ಜನರಿಗೆ ಸಿಲಿಂಡರ್ ಬುಕ್ ಮಾಡುವ, ಕಾಯುವ ಚಿಂತೆಯೇ ಇರುವುದಿಲ್ಲ. ಯಾಕಂದ್ರೆ, ಅಲ್ಲಿ ಗ್ಯಾಸ್ ಪೂರೈಕೆ ವ್ಯವಸ್ಥೆಯೇ ಬೇರೆ ರೀತಿ ಇದೆ. ಅದು ಹೇಗೆಂದು ತಿಳಿಯೋಣ ಬನ್ನಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
23
Image Credit : Chat GPT
ಗ್ಯಾಸ್ ಹೇಗೆ ಬಳಸುತ್ತಾರೆ?
ಅಮೆರಿಕದ ನಗರಗಳಲ್ಲಿ ಪ್ರತಿ ಮನೆಗೂ ಪೈಪ್‌ಲೈನ್ ಮೂಲಕವೇ ಗ್ಯಾಸ್ ಸಂಪರ್ಕ ಕಲ್ಪಿಸಲಾಗುತ್ತದೆ. ಅಂದ್ರೆ, ಗ್ಯಾಸ್ ಕಂಪನಿಯಿಂದ ನೇರವಾಗಿ ಮನೆಗೆ ಅಂಡರ್‌ಗ್ರೌಂಡ್ ಪೈಪ್‌ಗಳ ಮೂಲಕ ಗ್ಯಾಸ್ ಸರಬರಾಜು ಆಗುತ್ತದೆ. ನಮ್ಮಲ್ಲಿ ಕರೆಂಟ್‌ಗೆ ಮೀಟರ್ ಇರುವಂತೆ, ಅಲ್ಲಿ ಗ್ಯಾಸ್‌ಗೂ ಮೀಟರ್ ಇರುತ್ತದೆ. ಬಳಸಿದಷ್ಟೇ ಬಿಲ್ ಪಾವತಿಸಿದರೆ ಸಾಕು. ಹೀಗಾಗಿ, ಗ್ಯಾಸ್ ಖಾಲಿಯಾಗುವ ಭಯವೇ ಇರುವುದಿಲ್ಲ.
33
Image Credit : Gemini AI
ಗ್ಯಾಸ್ ಅಡುಗೆಗೆ ಮಾತ್ರವಲ್ಲ..
ಅಮೆರಿಕನ್ನರು ಗ್ಯಾಸ್ ಅನ್ನು ಕೇವಲ ಅಡುಗೆಗೆ ಮಾತ್ರ ಬಳಸುವುದಿಲ್ಲ. ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿಡಲು ಹೀಟಿಂಗ್ ಸಿಸ್ಟಮ್, ವಾಟರ್ ಹೀಟರ್ ಮತ್ತು ಡ್ರೈಯರ್‌ಗಳಿಗೂ ಗ್ಯಾಸ್ ಅನ್ನೇ ಬಳಸುತ್ತಾರೆ. ಇನ್ನು ಗ್ರಾಮೀಣ ಭಾಗಗಳಲ್ಲಿ ಪೈಪ್‌ಲೈನ್ ಬದಲು, ದೊಡ್ಡ ಟ್ಯಾಂಕ್‌ಗಳನ್ನು ಅಳವಡಿಸಿ ಗ್ಯಾಸ್ ಪೂರೈಸುತ್ತಾರೆ. ವರ್ಷಕ್ಕೊಮ್ಮೆ ಕಂಪನಿಯವರೇ ಬಂದು ಈ ಟ್ಯಾಂಕ್‌ಗಳನ್ನು ರೀಫಿಲ್ ಮಾಡುತ್ತಾರೆ.
Latest Videos

