ಟೋಕಿಯೋ :  ನಮ್ಮಲ್ಲಿ ಚಾಲಕರ ಅಚಾತುರ್ಯದಿಂದ ರಸ್ತೆ ಅಪಘಾತಗಳು ನಡೆಯುವುದು ಸಾಮಾನ್ಯ. ಹಾಗಾಗಿ, ವಿದೇಶಗಳಲ್ಲಿ ಇಂಥ ಅಚಾತುರ್ಯಗಳು ನಡೆಯಬಾರದು ಎಂಬ ಕಾರಣಕ್ಕಾಗಿ ಡ್ರೈವರ್‌ಲೆಸ್ ಕಾರು, ರೈಲುಗಳೆಲ್ಲ ಕಾರ್ಯಾಚರಿಸುತ್ತಿವೆ. 

ಆದಾಗ್ಯೂ, ಜಪಾನ್‌ನಲ್ಲಿ ಚಾಲಕ ರಹಿತ ರೈಲು ತಪ್ಪಾದ ರೈಲ್ವೆ ಮಾರ್ಗದಲ್ಲಿ ಚಲಿಸಿದ ಪರಿಣಾಮ ರೈಲ್ವೆ ಅಪಘಾತ ಸಂಭವಿಸಿದೆ. ಇದರಿಂದ 14 ಮಂದಿ ಗಾಯಗೊಂಡಿದ್ದಾರೆ. 

ಹೌದು, ಟೋಕಿಯೋದಲ್ಲಿ ರೈಲು ನಿಲ್ದಾಣದಿಂದ ತಪ್ಪಾದ ಮಾರ್ಗದಲ್ಲಿ ಚಲಿಸಿದ ಚಾಲಕ ರಹಿತ ರೈಲು ಮತ್ತೊಂದು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. 30 ವರ್ಷಗಳ ಇತಿಹಾಸದಲ್ಲಿ ಇಂಥ ದುರಂತ ಸಂಭವಿಸಿದ್ದು ಇದೇ ಮೊದಲು.