ನಿಜವಾದ ಹೀರೋಗಳಿಗೆ ಚಪ್ಪಾಳೆಯ ಕೃತಜ್ಞತೆ ಸಲ್ಲಿಸಿದ ಸಚಿನ್ ತೆಂಡುಲ್ಕರ್!
ಕೊರೋನಾ ವೈರಸ್ ವಿರುದ್ಧ ಹೋರಾಡಲು ಪ್ರಧಾನಿ ಮೋದಿಯ ಜನತಾ ಕರ್ಫ್ಯೂ ಯಶಸ್ವಿಯಾಗಿದೆ. ಇಷ್ಟೇ ಅಲ್ಲ ನಮ್ಮ ಸುರಕ್ಷತೆಗಾಗಿ ಶ್ರಮವಹಿಸುತ್ತಿರುವ ವೈದ್ಯರು,ಆಸ್ಪತ್ರೆಗಳ ಸಂಪೂರ್ಣ ಸಿಬ್ಬಂಧಿವರ್ಗಕ್ಕೆ ಚಪ್ಪಾಳೆಯ ಕೃತಜ್ಞತೆ ಕೂಡ ಸಲ್ಲಿಸಲಾಗಿದೆ. ಇಡೀ ದೇಶವೇ ಚಪ್ಪಾಳೆ ಮೂಲಕ ಅವಿರತ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕೂಡ ಚಪ್ಪಾಳೆ ತಟ್ಟಿದ್ದಾರೆ. ಇಷ್ಟೇ ಅಲ್ಲ ಜನತಗೆ ವಿಶೇಷ ಮನವಿ ಮಾಡಿದ್ದಾರೆ.
ಮುಂಬೈ(ಮಾ.21): ಕೊರೋನಾ ವೈರಸ್ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗುತ್ತಿದೆ. ವೈರಸ್ ತಡೆಗಟ್ಟಲು ಹಲವು ಪ್ರಯತ್ನಗಳು ನಡೆಯುತ್ತಿದ್ದರೂ ಹತೋಟಿ ಬರುತ್ತಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಮೂಲಕ ಸ್ವಂಯ ದಿಗ್ಬಂಧನಕ್ಕೆ ಕರೆ ನೀಡಿದ್ದರು. ಬಳಿಕ ನಮ್ಮ ಸುರಕ್ಷತೆಗಾಗಿ ಶ್ರಮಿಸುತ್ತಿರುವ ನಿಜವಾದ ಹೀರೋಗಳಿಗೆ ಚಪ್ಪಾಳೆ ಮೂಲಕ ಕೃತಜ್ಞತೆ ಹೇಳಲು ಮನವಿ ಮಾಡಿದ್ದರು. ಮೋದಿ ಕರೆಗೆ ಜನರು ಸ್ಪಂಧಿಸಿದ್ದಾರೆ. ಜೊತೆಗೆ ರಿಯಲ್ ಹೀರೋಗಳಿಗೆ ಚಪ್ಪಾಳೆ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಕೊರೋನಾ ವಿರುದ್ಧ ಹೋರಾಟ; ಭಾರತ ಹಾಕಿ ತಂಡದಿಂದ ಕೃತಜ್ಞತೆಯ ಚಪ್ಪಾಳೆ!
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಮಹತ್ವದ ಸಂದೇಶದ ಜೊತೆಗೆ ಚಪ್ಪಾಳೆ ಕೃತಜ್ಞತೆ ಸಲ್ಲಿಸಿದ್ದಾರೆ. ಇವತ್ತು ಭಾರತೀಯರಾದ ನಾವು ಕೊರೋನಾ ವೈರಸ್ ವಿರುದ್ಧ ಜೊತೆಯಾಗಿ ಹೋರಾಟ ಮಾಡಿದ್ದೇವೆ. ಅಂತರ ಕಾಯ್ದುಕೊಂಡು ಕೊರೋನಾ ವೈರಸ್ ವಿರುದ್ಧದ ಹೋರಾಟ ಮಾಡಿದ್ದೇವೆ. ನಾವೀಗ ಈ ವೈರಸ್ ವಿರುದ್ಧದ ಹೋರಾಟವನ್ನು ಜನರಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಮುಂದುವರಿಸಬೇಕು. ಈ ಸಂದರ್ಭದಲ್ಲಿ ನಮ್ಮ ಸುರಕ್ಷತೆಗೆ, ನಮ್ಮ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಚಪ್ಪಾಳೆ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಂದು ಇಡೀ ಭಾರತವೇ ಸ್ಥಬ್ತವಾಗಿತ್ತು. ತುರ್ತು ಸೇವೆ ಹೊರತುಪಡಿಸಿ ಎಲ್ಲಾ ಸೇವೆಗಳು ಬಂದ್ ಆಗಿತ್ತು. ಈ ಮೂಲಕ ಜನರು ಜೊತೆಯಾಗಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಂಕಲ್ಪ ಮಾಡಿದ್ದಾರೆ. ಈ ಹೋರಾಟ ಒಂದು ದಿನಕ್ಕೆ ಮೀಸಲಾಗಿಡದೆ ವೈರಸ್ ಸಂಪೂರ್ಣ ಹತೋಟಿಗೆ ಬರುವ ವರೆಗೂ ಮುಂದುವರಿಸಿದರೆ ಉತ್ತಮ.