ಕೊರೋನಾ ವಿರುದ್ಧ ಹೋರಾಟ; ಭಾರತ ಹಾಕಿ ತಂಡದಿಂದ ಕೃತಜ್ಞತೆಯ ಚಪ್ಪಾಳೆ!
ಇಡೀ ದೇಶವೇ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನಿಂತವರಿಗೆ ಕೃತಜ್ಞತೆಯ ಚಪ್ಪಾಳೆ ನೀಡಿದೆ. ಸಾಮಾನ್ಯ ಜನರಿಂದ ಹಿಡಿದು ರಾಜಕಾರಣಿಗಳು, ಸೆಲೆಬ್ರೆಟಿಗಳು, ದಿಗ್ಗಜರು, ಕ್ರೀಡಾಪಟುಗಳು ಸೇರಿದಂತೆ ಎಲ್ಲರೂ ಕೃತಜ್ಞತೆ ಚಪ್ಪಾಳೆ ನೀಡಿದ್ದಾರೆ.
ನವದೆಹಲಿ(ಮಾ.22): ಕೊರೋನಾ ವೈರಸ್ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಇಂದು(ಮಾ.22) ಜನತಾ ಕರ್ಫ್ಯೂ ಅತ್ಯಂತ ಯಶಸ್ವಿಯಾಗಿದೆ. ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್, ದಾದಿಯರು, ಆಶಾ ಕಾರ್ಯಕರ್ತೆಯರು, ನಗರ, ಪಟ್ಟಣಗಳನ್ನು ಶುಚಿಯಾಗಿಡುವ ಪೌರಕಾರ್ಮಿಕರು ಸೇರಿದಂತೆ ಅವರಿತ ಪರಿಶ್ರಮವಹಿಸುತ್ತಿರುವವರಿಗೆ ದೇಶ ಚಪ್ಪಾಳೆ ಮೂಲಕ ಕೃತಜ್ಞತೆ ಸಲ್ಲಿಸಿದೆ.
ಕೊರೋನಾ ವೈರಸ್: ಸರ್ಕಾರ ಸೂಚನೆ ಮೀರಿ ರಾಷ್ಟ್ರಪತಿ ಭೇಟಿಯಾದ ಮೇರಿ ಕೋಮ್!
ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡ ಕೂಡ ಚಪ್ಪಾಳೆ ಮೂಲಕ ಕೃತಜ್ಞತೆ ಸಲ್ಲಿಸಿದೆ. ಜನತಾ ಕರ್ಫ್ಯೂ ಕಾರಣ ಇಂದು ಭಾರತ ಹಾಕಿ ತಂಡದ ಅಭ್ಯಾಸಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಸಂಜೆವೇಳೆ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಚಪ್ಪಾಳೆ ಮೂಲಕ ಕೃತಜ್ಞತೆ ಸಲ್ಲಿಸಿತು.
ಕೊರೋನಾ ವೈರಸ್‌ಗೆ ಬಲಿಯಾದ ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಲೊರೆಂಝೋ!
ಪುರುಷ ಹಾಗೂ ಮಹಿಳಾ ಹಾಕಿ ತಂಡ ತಾವಿರುವ ಕಟ್ಟದ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಮೂಲಕ ಕೃತಜ್ಞತೆ ಸಲ್ಲಿಸಿದೆ. ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಹಲವು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಇತ್ತ ಕರ್ನಾಟಕದಲ್ಲಿ 9 ಜಿಲ್ಲೆಗಳು ಲಾಕ್‌ಡೌನ್ ಮಾಡಲಾಗಿದೆ.