ಗಣಿಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತೆ ರಾಜಕೀಯಕ್ಕೆ ಮರಳಲು ಚಿಂತನೆ ನಡೆಸಿದ್ದಾರೆ. ಆದರೆ ಬಳ್ಳಾರಿಗೆ ಹೋಗಲು ಸಾಧ್ಯವಾಗದ ಕಾರಣ ರಾಜಕೀಯದಿಂದ ಸ್ಫರ್ಧೆ ಮಾಡಲು ಅವರು ಕೆಲವೊಂದು ಕ್ಷೇತ್ರಗಳತ್ತ ಮುಖಮಾಡಿದ್ದಾರೆ. ಅದರಲ್ಲೂ ಆಂಧ್ರದ ಗಡಿ ಜಿಲ್ಲೆಯ ಮೇಲೆ ಇವರ ಕಣ್ಣು ಬಿದ್ದಿದೆ. ಅದ್ಯಾವ ಜಿಲ್ಲೆ ಅಂತೀರಾ? ಈ ಸ್ಟೋರಿ ಓದಿ
ಚಿಕ್ಕಬಳ್ಳಾಪುರ(ಮೇ.14): ಗಣಿಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತೆ ರಾಜಕೀಯಕ್ಕೆ ಮರಳಲು ಚಿಂತನೆ ನಡೆಸಿದ್ದಾರೆ. ಆದರೆ ಬಳ್ಳಾರಿಗೆ ಹೋಗಲು ಸಾಧ್ಯವಾಗದ ಕಾರಣ ರಾಜಕೀಯದಿಂದ ಸ್ಫರ್ಧೆ ಮಾಡಲು ಅವರು ಕೆಲವೊಂದು ಕ್ಷೇತ್ರಗಳತ್ತ ಮುಖಮಾಡಿದ್ದಾರೆ. ಅದರಲ್ಲೂ ಆಂಧ್ರದ ಗಡಿ ಜಿಲ್ಲೆಯ ಮೇಲೆ ಇವರ ಕಣ್ಣು ಬಿದ್ದಿದೆ. ಅದ್ಯಾವ ಜಿಲ್ಲೆ ಅಂತೀರಾ? ಈ ಸ್ಟೋರಿ ಓದಿ
ಜನಾರ್ದನ ರೆಡ್ಡಿ ಕಣ್ಣು ಚಿಕ್ಕಬಳ್ಳಾಪುರ ಜಿಲ್ಲೆ ಮೇಲೆ ಬಿದ್ದಿದೆ. ಕಾರಣ ಜಿಲ್ಲೆಯ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳಲ್ಲಿ ರೆಡ್ಡಿಗಳೇ ಶಾಸಕರು. ಹೀಗಾಗಿ ಬಾಗೇಪಲ್ಲಿ ಅಥವಾ ಗೌರಿಬಿದನೂರು ಕ್ಷೇತ್ರದಿಂದ ಸ್ಪರ್ಧಿಸುವ ಮುನ್ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಬಾಗೇಪಲ್ಲಿಯಲ್ಲಿ ಸಿಪಿಐಎಂ ಪಕ್ಷ ಬಿಟ್ಟರೆ ಬೇರೆ ಯಾವುದೇ ಪಕ್ಷ ಪ್ರಭಾವವಿಲ್ಲ, ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಹೆಚ್ಚು ಮಾನ್ಯತೆ, ಜೊತೆಗೆ ಇದು ಆಂಧ್ರದ - ಕರ್ನಾಟಕದ ಗಡಿ ತಾಲೂಕು ಆದ್ದರಿಂದ ಇಲ್ಲಿ ವೈಎಸ್ ಆರ್ ಜಗನ್ ಪ್ರಾಬಲ್ಯ ಕೂಡ ಇದೆ. ಹೀಗಾಗಿ ಸ್ಫರ್ಧೆ ಮಾಡಿದ್ರು ಆಶ್ಚರ್ಯ ಪಡಬೇಕಿಲ್ಲ. ಇನ್ನೂ ಬಾಗೇಪಲ್ಲಿಯಲ್ಲಿ ರೆಡ್ಡಿಯವರ ಪಾಳಯದಲ್ಲಿರುವ ನಟ ಸಾಯಿಕುಮಾರ್ ಕೂಡ ಪಕ್ಷ ಟಿಕೆಟ್ ಕೊಟ್ಟರೆ ನಾನು ಬಾಗೇಪಲ್ಲಿಯಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ.
ಬೇರೆ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಗೌರಿಬಿದನೂರಿನಲ್ಲಿ ಸಂಘಟನೆ, ಕಾರ್ಯಕರ್ತರು ಅತೀ ಹೆಚ್ಚಿನ ಸಂಖೆಯಲ್ಲಿದ್ದಾರೆ. ವಾಲ್ಮೀಕಿ ಜನಾಂಗದ ಮತಗಳು ಹೆಚ್ಚಾಗಿದ್ದು, ಶ್ರೀರಾಮಲು ಇವರನ್ನು ಮನವೊಲಿಸಬಹುದು ಹೀಗಾಗಿ ರೆಡ್ಡಿ ಈ ಕ್ಷೇತ್ರದಿಂದಲೂ ಸ್ಪರ್ಧಿಸಬಹುದು ಅಂತಾರೆ ರಾಜಕೀಯ ವಿಶ್ಲೇಷಕರು.
ಒಟ್ಟಿನಲ್ಲಿ ಜನಾರ್ದನ ರೆಡ್ಡಿ ಬಾಗೇಪಲ್ಲಿ ಅಥವಾ ಗೌರಿಬಿದನೂರು ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿರುವ ಚಿಕ್ಕಬಳ್ಳಾಪುರದಲ್ಲಿ ಕಮಲ ಅರಳಿಸುತ್ತಾರಾ ಕಾದು ನೋಡಬೇಕು.
