ಅಧಿಕಾರಿಗಳು ಕೋಡ್​ ವರ್ಡ್​ನಲ್ಲಿ ಹೆಸರಿಸಿದ ಬಿಗ್ ಬಾಸ್ ಯಾರು, ಮೂವರು ಸಚಿವರಲ್ಲಿ ಒಬ್ಬರ ಹೆಸರನ್ನು ...

ಮಂಗಳೂರು(ಡಿ.3): ರಾಜ್ಯ ಸರ್ಕಾರದ ಅಧಿಕಾರಿಗಳಿಬ್ಬರ ಮನೆಯಲ್ಲಿ ಅಪಾರ ಪ್ರಮಾಣದ ಕಾಳಧನ ಸಿಕ್ಕಿರುವುದು ರಾಜ್ಯದ ಇತಿಹಾಸದಲ್ಲೇ ಕರಾಳ ದಿನ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ವಿಷಾದ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳೂರಿನಲ್ಲಿ ಮಾತನಾಡಿದ ಅವರು, 152 ಕೋಟಿ ರೂ.ಗಳಲ್ಲಿ ಕಾಳಧನದ ಪ್ರಮಾಣ ಎಷ್ಟು ಎಂಬ ಬಗ್ಗೆ ವಿವರ ನೀಡುವಂತೆ ಆಗ್ರಹಿಸಿದ್ದಾರೆ. ಅಧಿಕಾರಿಗಳು ಕೋಡ್​ ವರ್ಡ್​ನಲ್ಲಿ ಹೆಸರಿಸಿದ ಬಿಗ್ ಬಾಸ್ ಯಾರು, ಮೂವರು ಸಚಿವರಲ್ಲಿ ಒಬ್ಬರ ಹೆಸರನ್ನು ಮಹದೇವಪ್ಪ ಎಂದು ಮಾಧ್ಯಮ ಹೆಸರಿಸಿದ್ದು, ಉಳಿದಿಬ್ಬರು ಯಾರು ಎಂದು ಪೂಜಾರಿ ಪ್ರಶ್ನಿಸಿದ್ದಾರೆ. ಇದರ ಪ್ರಮುಖ ರೂವಾರಿ ಸಿಎಂ ಎಂದು ರಾಜ್ಯದ ಜನ ಸಂಶಯ ಪಡುತ್ತಿದ್ದಾರೆ. ಸಂಜೆಯ ಒಳಗೆ ಈ ವಿಚಾರವನ್ನು ಸ್ಪಷ್ಟಪಡಿಸಿ ಇಲ್ಲವೇ ಹೈಕಮಾಂಡ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹೈಕಮಾಂಡ್ ಈ ವಿಚಾರದಲ್ಲಿ ಹಿಂದೇಟು ಹಾಕಿದರೆ ಅಕ್ರಮದಲ್ಲಿ ಅದಕ್ಕೂ ಪಾಲಿದೆ ಎಂಬ ಅರ್ಥ ಕಲ್ಪಿಸಲಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದರು.