ಮೇವು ಹಗರಣದ ಮೂರನೇ ಪ್ರಕರಣದಲ್ಲಿಯೂ ಲಾಲು ಅಪರಾಧಿ : ಮತ್ತೆ ಹಿನ್ನಡೆ

First Published 24, Jan 2018, 1:18 PM IST
Jailed Lalu Prasad now convicted in Third fodder scam case
Highlights

ಮೇವು ಹಗರಣದ ಮೂರನೇ ಕೇಸಿನಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಅಪರಾಧಿ ಎಂದು ತೀರ್ಪು ನೀಡಲಾಗಿದೆ.

ರಾಂಚಿ (ಜ.24): ಮೇವು ಹಗರಣದ ಮೂರನೇ ಕೇಸಿನಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಅಪರಾಧಿ ಎಂದು ತೀರ್ಪು ನೀಡಲಾಗಿದೆ.

ರಾಂಚಿಯ ಸಿಬಿಐ ಕೋರ್ಟ್ ಲಾಲೂ ವಿರುದ್ಧ ತೀರ್ಪನ್ನು ಪ್ರಕಟಿಸಿದೆ. ಇದರಿಂದ ಲಾಲೂ ಪ್ರಸಾದ್ ಯಾದವ್’ಗೆ ಭಾರಿ ಹಿನ್ನಡೆಯಾದಂತಾಗಿದೆ.

ಈಗಾಗಲೇ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಲಾಲು  ಮೂರನೇ ಪ್ರಕರಣದಲ್ಲಿಯೂ ಅಪರಾಧಿಯಾಗಿದ್ದಾರೆ. ಈ ಸಂಬಂಧ  ಬುಧವಾರ ಸಂಜೆ ವೇಳೆಗೆ ತೀರ್ಪನ್ನು ಪ್ರಕಟ ಮಾಡುವ ಸಾಧ್ಯತೆಗಳಿವೆ. 1990ರಲ್ಲಿ ಚೈಬಾಸ ಖಜಾನೆಯಿಂದ ಹಣವನ್ನು ಲೂಟಿ ಮಾಡಿದ ಕೇಸು ಇದಾಗಿದೆ.

loader