ಈಗಾಗಲೇ ಆರೋಪಿ ಶೋಧಕ್ಕಾಗಿ ವಿಶೇಷ 3 ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಕಳೆದ 6 ದಿನಗಳಿಂದ ಬೆಂಗಳೂರು ಸೇರಿದಂತೆ ಕೇರಳದಲ್ಲಿ ಆರೋಪಿಯನ್ನು ಆರ್.ಟಿ. ನಗರ ಪೊಲೀಸರು ಹುಡುಕುತ್ತಿದ್ದಾರೆ.
ಬೆಂಗಳೂರು(ಆ.20): ಜಗ್ಗೇಶ್ ಅವರ ಪುತ್ರ ನಟ ಗುರುರಾಜ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಶಿವಶಂಕರ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. ಆರೋಪಿ ನಿನ್ನೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.
ಈಗಾಗಲೇ ಆರೋಪಿ ಶೋಧಕ್ಕಾಗಿ ವಿಶೇಷ 3 ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಕಳೆದ 6 ದಿನಗಳಿಂದ ಬೆಂಗಳೂರು ಸೇರಿದಂತೆ ಕೇರಳದಲ್ಲಿ ಆರೋಪಿಯನ್ನು ಆರ್.ಟಿ. ನಗರ ಪೊಲೀಸರು ಹುಡುಕುತ್ತಿದ್ದಾರೆ. ಘಟನೆ ನಂತರ ಆರೋಪಿ ಮೋಬೈಲ್'ಅನ್ನು ಮನೆಯಲ್ಲಿ ಬಿಟ್ಟುಹೋಗಿದ್ದಾನೆ.
ಗುರುರಾಜ್ ಅವರು ಮಗನನ್ನು ಶಾಲೆಗೆ ಬಿಡಲು ಹೋದಂತಹ ಸಂದರ್ಭದಲ್ಲಿ ಆರ್.ಟಿ.ನಗರದಲ್ಲಿ ವೇಗದ ಚಾಲನೆ ವಿಚಾರವಾಗಿ ಮಾತಿಗೆ ಮಾತು ಬೆಳೆದು ಆರೋಪಿ ಚಾಕುವಿನಿಂದ ಇರಿದಿದ್ದ.
