ಅಮರಾವತಿ, (ಜೂ.22):  ತಿರುಪತಿ ತಿರುಮಲ ದೇವಸ್ಥಾನ(ಟಿಡಿಪಿ)ದ ಮಂಡಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಚಿಕ್ಕಪ್ಪ ವೈವಿ ಸುಬ್ಬಾ ರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ತಿರುಪತಿ ತಿಮ್ಮಪ್ಪ ದೇವಸ್ಥಾನ ಮಂಡಳಿಗೆ ವೈವಿ ಸುಬ್ಬಾ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ ಎಂದು ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ಮನ್ ಮೋಹನ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಅಬ್ಬಾ...! ತಿರುಪತಿ ತಿಮ್ಮಪ್ಪನ ಬಳಿ ಇಷ್ಟು ಟನ್‌ ಚಿನ್ನ ಇದೆಯಂತೆ!

ಜಗನ್ ಚಿಕ್ಕಪ್ಪ ವೈವಿ ಸುಬ್ಬಾ ರೆಡ್ಡಿ ವೈಎಸ್ ಆರ್ ಸಿಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.  ಟಿಟಿಡಿ ಮಂಡಳಿಯ ಇನ್ನುಳಿದ ಸದಸ್ಯರನ್ನು ಶೀಘ್ರದಲ್ಲಿಯೇ ನೇಮಕ ಮಾಡಲಾಗುವುದು ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.

ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡುವುದೇಕೆ?

ಟಿಟಿಡಿ ಅಧ್ಯಕ್ಷ ನಾಮನಿರ್ದೇಶಿತ ಹುದ್ದೆಯಾಗಿದ್ದು, ಇದನ್ನು ಕ್ಯಾಬಿನೆಟ್ ಶ್ರೇಣಿ ಎಂದು ಪರಿಗಣಿಸಲಾಗಿದೆ. ತಿರುಪತಿ ತಿರುಮಲ ದೇವಸ್ಥಾನ ಒಂದು ಸ್ವತಂತ್ರ ಮಂಡಳಿಯಾಗಿದ್ದು, ಈ ಸಮಿತಿ ತಿರುಪತಿಯ ವೆಂಕಟೇಶ್ವರಸ್ವಾಮಿ ದೇವಸ್ಥಾನದ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ.