ರಮಾನಾಥ್ ರೈಯವರೇ ಮುಖ್ಯಮಂತ್ರಿಯವರ ಶನಿ ನಿಮಗೆ ಹಿಡಿದಿದೆಯೇ?

ಬಂಟ್ವಾಳದಲ್ಲಿ ಕಲ್ಲಡ್ಕ ಪ್ರಭಾಕರ್​ ಭಟ್​ ಶಾಲೆಗಳ ಅನುದಾನ ರದ್ದು ಪಡಿಸಿರುವ ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಿಡಿ ಕಾರಿದ್ದಾರೆ. ಊಟ ಕೊಡುವುದನ್ನು ನಿಲ್ಲಿಸುವವರು ಎಂಥಾ ರಾಕ್ಷಸರು? ಮುಖ್ಯಮಂತ್ರಿಯೇ ಇರಲಿ, ಬೇರೆ ಯಾರೇ ಆಗಲಿ ತಪ್ಪೇ ಅದು ಎಂದು ಸಿಎಂ ವಿರುದ್ಧ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮಾನಾಥ್ ರೈಯವರೇ ಮುಖ್ಯಮಂತ್ರಿಯವರ ಶನಿ ನಿಮಗೆ ಹಿಡಿದಿದೆಯೇ? ಬರುವ ಸಲ ಚುನಾವಣೆಯಲ್ಲಿ ಗೆಲ್ಲಬೇಕೆನ್ನುವ ಆಸೆಯಿಲ್ಲವೇ?ಹೋಗಿ ಮುಖ್ಯಮಂತ್ರಿ ಕಾಲು ಹಿಡಿದು ತಾಕತ್ತಿದ್ರೆ ಮತ್ತೆ ಮಕ್ಕಳಿಗೆ ಊಟ ಕೊಡಿಸಿ ಮಕ್ಕಳಿಗೆ ಮತ್ತೆ ಊಟ ಕೊಡದೇ ಇದ್ರೆ ಪೂಜಾರಿ ಖಂಡಿತಾ ನಿಮ್ಮನ್ನು ಬಿಡಲ್ಲ ಎಂದು ಸಿಎಂ ಹಾಗೂ ರಮಾನಾಥ ರೈ ವಿರುದ್ಧ ಕಿಡಿ ಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred