Asianet Suvarna News Asianet Suvarna News

ಮೋದಿ ಕಾಶ್ಮೀರ ಭಾಷಣ: ಕಾಶ್ಮೀರಿಗರ ಪಾಲಿಗೆ ವಿಷಪ್ರಾಶನ?

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಹಿನ್ನೆಲೆ| ಪ್ರಧಾನಿ ಮೋದಿ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದ ಕಾಶ್ಮೀರಿಗರು| ‘ಕೇಂದ್ರ ಸರ್ಕಾರ ಕೇವಲ ಭುಮಿ ಪಡೆದಿದೆ ನಮ್ಮ ಹೃದಯ ಗೆದ್ದಿಲ್ಲ’| ‘ಕಾರ್ಪೋರೇಟ್ ಕ್ಷೇತ್ರದ ಪ್ರವೇಶದಿಂದಾಗಿ ಕಣಿವೆಯ ಸೌಂದರ್ಯಕ್ಕೆ ಧಕ್ಕೆ’| ‘ಸರ್ಕಾರದ ನಿರ್ಧಾರದಿಂದಾಗಿ ಕಾಶ್ಮೀರಿಗರ ಮೂಲ ಅಸ್ಮಿತೆಗೆ ಧಕ್ಕೆ|

J&K citizens not impressed with PM Modi Speech on Kashmir
Author
Bengaluru, First Published Aug 9, 2019, 1:33 PM IST

ನವದೆಹಲಿ(ಆ.09): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಕುರಿತ ಪ್ರಧಾನಿ ಮೋದಿ ಭಾಷಣಕ್ಕೆ ಬಹುತೇಕ ಕಾಶ್ಮೀರಿಗರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಂವಿಧಾನದ 370ನೇ ವಿಧಿ ಹಾಗೂ ಕಲಂ 35ಎ ರದ್ದತಿ ನಿರ್ಣಯವನ್ನು ಪ್ರಜಾಸತಾತ್ಮಕ ವಿರೋಧಿ ಕ್ರಮ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರ ಕಾಶ್ಮೀರದ ಭೂಮಿ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ. ಆದರೆ ಕಾಶ್ಮೀರಿಗಳ ಹೃದಯವನ್ನು ಗೆಲ್ಲುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾಶ್ಮೀರಿಗರು ಅಸಮಾಧಾನ ಹೊರಹಾಕಿದ್ದಾರೆ.

ವಿಶೇಷ ಸ್ಥಾನಮಾನ ರದ್ದತಿಯಿಂದಾಗಿ ಇದೀಗ ಕಣಿವೆಯಲ್ಲಿ ಮೂಲಸೌಕರ್ಯ ಸಂಬಂಧಿತ ಚಟುವಟಿಕೆಗಳಿಗೆ ವೇಗ ಸಿಗಲಿದೆ. ಇದಿರಂದ ಸೂಕ್ಷ್ಮ ಪರಿಸರ ಪ್ರಾಂತ್ಯಕ್ಕೆ ಸಾಕಷ್ಟು ಹಾನಿಯಾಗಲಿದೆ ಎಂದು ಪರಿಸರವಾದಿಗಳು  ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕಣಿವೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹೋಟೆಲ್, ಫ್ಲೈ ಓವರ್ ಮುಂತಾದ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗುತ್ತದೆ. ಅಲ್ಲದೇ ಕಾರ್ಪೋರೇಟ್ ಕ್ಷೇತ್ರಕ್ಕೆ ಕಣಿವೆಯಲ್ಲಿ ಮುಕ್ತ ಅವಕಾಶ ಸಿಗಲಿರುವುದರಿಂದ ಸುಂದರ ಪರಿಸರದ ಮೇಲೆ ಹಾನಿಯಾಗಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸರ್ಕಾರದ ನಿರ್ಧಾರದಿಂದಾಗಿ ನಮ್ಮ ಮೂಲ ಅಸ್ಮಿತೆಗೆ ಧಕ್ಕೆ ಬೀಳಲಿದ್ದು, ಈ ನಿರ್ಧಾರಕ್ಕೆ ಸರ್ಕಾರ ಮುಂದೊಂದು ದಿನ ಪಶ್ಚಾತಾಪ ಪಡಲಿದೆ ಎಂದು ಕಾಶ್ಮೀರ  ಮೂಲದ ದೆಹಲಿಯ ಪತ್ರಕರ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios