ಹಿಮಾಲಯದ ತಪ್ಪಲು ಪ್ರದೇಶದಲ್ಲಿದ್ದಾನಾ ಹಿಮಮಾನವ?| ಭಾರತೀಯ ಸೇನೆಯ ಪರ್ವತಾರೋಹಿ ತಂಡಕ್ಕೆ ಸೆರೆಸಿಕ್ಕ ಹಿಮಮಾನವನ ಹೆಜ್ಜೆ ಗುರುತು| ಯೇತಿ ಎಂದರೆ ಯಾರು ಗೊತ್ತಾ?| ನೇಪಾಳ ಬಳಿಯ ಮಕಾಲು ಬೇಸ್ ಕ್ಯಾಂಪ್ ಬಳಿ ಪತ್ತೆಯಾದ ಬೃಹತ್ ಹೆಜ್ಜೆ ಗುರುತು| 32X15 ಇಂಚು ಸುತ್ತಳತೆಯ ಹಿಮಮಾನವನ ಬೃಹತ್ ಹೆಜ್ಜೆ ಗುರುತು|

ನವದೆಹಲಿ(ಏ.30): ಪೌರಾಣಿಕ ಪ್ರಾಣಿ ಎಂದೇ ಜನಜನಿತವಾಗಿರುವ ಯೇತಿಯ ಹೆಜ್ಜೆ ಗುರುತನ್ನು ಭಾರತೀಯ ಸೇನೆಯ ತಂಡವೊಂದು ನೇಪಾಳದ ಬಳಿ ಪತ್ತೆ ಹಚ್ಚಿದೆ.

ಸಾಮಾನ್ಯವಾಗಿ ಹಿಮ ಮಾನವ ಎಂದು ಕರೆಯಲ್ಪಡುವ ಯೇತಿಯ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿರುವುದಾಗಿ ಭಾರತೀಯ ಸೇನೆಯ ಪರ್ವತಾರೋಹಿ ತಂಡವೊಂದು ಪತ್ತೆ ಹಚ್ಚಿದೆ.

ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ಸೇನೆ, ಬೃಹತ್ ಹೆಜ್ಜೆ ಗುರುತಿನ ಫೋಟೋ ಶೇರ್ ಮಾಡಿದೆ. 32X15 ಇಂಚು ಸುತ್ತಳತೆಯ ಈ ಹೆಜ್ಜೆ ಗುರುತು, ನೇಪಾಳ ಬಳಿಯ ಮಕಾಲು ಬೇಸ್ ಕ್ಯಾಂಪ್ ಬಳಿ ಪತ್ತೆಯಾಗಿದೆ ಎನ್ನಲಾಗಿದೆ.

Scroll to load tweet…

ಹಿಮಮಾನವ ಅಂದರೆ ಯಾರು?:

ಹಿಮದಿಂದ ಆವೃತ್ತವಾಗಿರುವ ವಿಶ್ವದ ಹಲವು ಪರ್ವತ ಪ್ರದೇಶಗಳಲ್ಲಿ ಯೇತಿ ಎಂಬ ಹಿಮಮಾನವ ವಾಸಿಸುವ ಕುರಿತು ಆಗಾಗ ಮಾತುಗಳು ಕೇಳಿ ಬರುತ್ತವೆ. ಭಾರತದ ಹಿಮಾಲಯ ತಪ್ಪಲು ಪ್ರದೇಶದಲ್ಲೂ ಹಿಮಮಾನವನ ಅಸ್ತಿತ್ವವಿದೆ ಎಂದು ಹೇಳಲಾಗುತ್ತದೆ.

ತಾವು ಹಿಮಮಾನವರನ್ನು ನೋಡಿದ್ದಾಗಿ ಹಲವರು ವಾದಿಸುತ್ತಾರೆ. ಅಲ್ಲದೇ ಭಾರತೀಯ ಸೇನೆಯ ಸೈನಿಕರು ಕೂಡ ಹಿಮಮಾನವನನ್ನು ಕಂಡಿದ್ದಾಗಿ ಹೆಳುತ್ತಾರೆ. ಆದರೆ ಇದುವರೆಗೂ ಹಿಮಮಾನವನ ಕುರಿತು ಯಾವುದೇ ಸ್ಪಷ್ಟ ಪುರಾವೆ ದೊರೆತಿಲ್ಲ.