ಮಾಜಿ ಸಿಎಂ, ಎಸ್ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಮನೆ ಮತ್ತು ಕಂಪನಿಗಳ ಮೇಲೆ ಸತತ 4 ದಿನಗಳಿಂದ ನಡೆಯುತ್ತಿದ್ದ ಐಟಿ ಅಧಿಕಾರಿಗಳ ದಾಳಿ ಮುಕ್ತಾಯಗೊಂಡಿದೆ. ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ಪತ್ರಗಳು ಐಟಿ ಅಧಿಕಾರಿಗಳಿಗೆ ಲಭ್ಯವಾಗಿವೆ.
ಬೆಂಗಳೂರು(ಸೆ.25): ಮಾಜಿ ಸಿಎಂ, ಎಸ್ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಮನೆ ಮತ್ತು ಕಂಪನಿಗಳ ಮೇಲೆ ಸತತ 4 ದಿನಗಳಿಂದ ನಡೆಯುತ್ತಿದ್ದ ಐಟಿ ಅಧಿಕಾರಿಗಳ ದಾಳಿ ಮುಕ್ತಾಯಗೊಂಡಿದೆ. ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ಪತ್ರಗಳು ಐಟಿ ಅಧಿಕಾರಿಗಳಿಗೆ ಲಭ್ಯವಾಗಿವೆ.
ಈ ಹಿಂದೆ ಸಿದ್ಧಾರ್ಥ್ 650 ಕೋಟಿ ಆಸ್ತಿಯನ್ನ ಘೋಷಿಸಿಕೊಂಡಿದ್ರು, ಆದ್ರೆ ಘೋಷಿಸಿಕೊಂಡಿದ್ದ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ದಾಖಲೆ ಪತ್ರಗಳನ್ನ ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇನ್ನು ಸಿದ್ಧಾರ್ಥ್ ಒಡೆತನದ ಕಾಫೀ ಡೇ ಸೇರಿದಂತೆ ಹಲವು ಕಂಪನಿಗಳು ನಿಯಮ ಮೀರಿ ಆಕ್ರಮ ಹಣ ವರ್ಗಾವಣೆ ಮಾಡಿರುವ ದಾಖಲೆಗಳು ಸಿಕ್ಕಿವೆ.
ಈ ಹಿನ್ನೆಲೆ ಆಕ್ರಮ ಆಸ್ತಿ ಕಾಯ್ದೆಯಡಿ ಸಿದ್ಧಾರ್ಥ್ಗೆ ಐಟಿ ಇಲಾಖೆ ನಾಳೆ ಸಮನ್ಸ್ ನೀಡುವ ಸಾಧ್ಯತೆಯಿದ್ದು, ಜಾರಿ ನಿರ್ದೇಶನಲಾಯದ ಅಧಿಕಾರಿಗಳು ಕೂಡ ಸಿದ್ಧಾರ್ಥ್ ವಿಚಾರಣೆಗೆ ಒಳಪಡಿಸುವ ಸಾದ್ಯತೆಯಿದೆ.
