ಕರ್ನಾಟಕದಲ್ಲಿ ತೆರಿಗೆ ಇಲಾಖೆ ದಾಳಿ ಹೊಸತೇನಲ್ಲ. ಆದರೆ, ಇದೊಂದು ದಾಳಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಅಂಥದೊಂದು ಶಿಕಾರಿಯನ್ನು ಆದಾಯ ತೆರಿಗೆ ಇಲಾಖೆ ಬು‘ವಾರ ಕರ್ನಾಟಕದಲ್ಲಿ ಮಾಡಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಅತ್ಯಂತ ಪ್ರಭಾವಿ ಮಂತ್ರಿಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಇಂ‘ನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮೇಲೆ ಐಟಿ ಬೇಟೆ ನಡೆದಿದೆ. ಕರ್ನಾಟಕವಷ್ಟೇ ಅಲ್ಲ, ಹೊರರಾಜ್ಯಗಳಲ್ಲೂ ಏಕಕಾಲಕ್ಕೆ ನಡೆದ ಈ ದಾಳಿ ಇಡೀ ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. 64 ಕಡೆ ದಾಳಿ ನಡೆದಿದ್ದು, ಕೋಟಿಗಟ್ಟಲೆ ಮೌಲ್ಯದ ನಗ-ನಗದು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ಸೂಟ್‌ಕೇಸ್‌ಗಟ್ಟಲೆ ಆಸ್ತಿ ದಾಖಲೆ ಪತ್ರಗಳನ್ನೂ ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಐಟಿ ದಾಳಿ ನಡೆಸಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದಲ್ಲೂ, ದೆಹಲಿ ಮಟ್ಟದಲ್ಲೂ ಕಾಂಗ್ರೆಸ್ ಮುಗಿಬಿದ್ದಿದೆ. ಇದು ರಾಜಕೀಯ ಸೇಡಿನ ಕ್ರಮ, ಷಡ್ಯಂತ್ರ. ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆಶ್ರಯ ನೀಡಿದ್ದಕ್ಕೆ ಪ್ರತೀಕಾರ ಎಂದು ಸಂಸತ್ತಲ್ಲೇ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಗುಜರಾತ್ ಶಾಸಕರಿಗೂ ದಾಳಿಗೂ ಸಂಬಂಧವಿಲ್ಲ. ಇದೊಂದು ಆರ್ಥಿಕ ಅಪರಾ‘ದ ಮೇಲೆ ನಡೆದ ದಾಳಿ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ದಾಳಿ ರಾಜಕೀಯ ಮಹತ್ವವನ್ನೂ ಪಡೆದಿದೆ. ಆ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರ ಇಂತಿದೆ.

ಬೆಂಗಳೂರು(ಆ.03): ಕರ್ನಾಟಕದಲ್ಲಿ ತೆರಿಗೆ ಇಲಾಖೆ ದಾಳಿ ಹೊಸತೇನಲ್ಲ. ಆದರೆ, ಇದೊಂದು ದಾಳಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಅಂಥದೊಂದು ಶಿಕಾರಿಯನ್ನು ಆದಾಯ ತೆರಿಗೆ ಇಲಾಖೆ ಬು‘ವಾರ ಕರ್ನಾಟಕದಲ್ಲಿ ಮಾಡಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಅತ್ಯಂತ ಪ್ರಭಾವಿ ಮಂತ್ರಿಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಇಂ‘ನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮೇಲೆ ಐಟಿ ಬೇಟೆ ನಡೆದಿದೆ. ಕರ್ನಾಟಕವಷ್ಟೇ ಅಲ್ಲ, ಹೊರರಾಜ್ಯಗಳಲ್ಲೂ ಏಕಕಾಲಕ್ಕೆ ನಡೆದ ಈ ದಾಳಿ ಇಡೀ ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. 64 ಕಡೆ ದಾಳಿ ನಡೆದಿದ್ದು, ಕೋಟಿಗಟ್ಟಲೆ ಮೌಲ್ಯದ ನಗ-ನಗದು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ಸೂಟ್‌ಕೇಸ್‌ಗಟ್ಟಲೆ ಆಸ್ತಿ ದಾಖಲೆ ಪತ್ರಗಳನ್ನೂ ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಐಟಿ ದಾಳಿ ನಡೆಸಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದಲ್ಲೂ, ದೆಹಲಿ ಮಟ್ಟದಲ್ಲೂ ಕಾಂಗ್ರೆಸ್ ಮುಗಿಬಿದ್ದಿದೆ. ಇದು ರಾಜಕೀಯ ಸೇಡಿನ ಕ್ರಮ, ಷಡ್ಯಂತ್ರ. ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆಶ್ರಯ ನೀಡಿದ್ದಕ್ಕೆ ಪ್ರತೀಕಾರ ಎಂದು ಸಂಸತ್ತಲ್ಲೇ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಗುಜರಾತ್ ಶಾಸಕರಿಗೂ ದಾಳಿಗೂ ಸಂಬಂಧವಿಲ್ಲ. ಇದೊಂದು ಆರ್ಥಿಕ ಅಪರಾ‘ದ ಮೇಲೆ ನಡೆದ ದಾಳಿ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ದಾಳಿ ರಾಜಕೀಯ ಮಹತ್ವವನ್ನೂ ಪಡೆದಿದೆ. ಆ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರ ಇಂತಿದೆ.

1) ದಾಳಿಯಿಂದ ಡಿಕೆಶಿಗೆ ಏನು ಲಾಭ-ನಷ್ಟ?

-ಡಿ.ಕೆ. ಶಿವಕುಮಾರ್‌ಗೆ ಈ ಐಟಿ ದಾಳಿ ಸಾಕಷ್ಟು ಹಿನ್ನಡೆ ಉಂಟು ಮಾಡಿದರೂ ಶಾಪದ ರೂಪದಲ್ಲಿ ಬಂದ ವರದಂತೆ ಕಾಣುವ ಸಂ‘ವವೂ ಉಂಟು

-ಕಾಂಗ್ರೆಸ್ ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿ ಪಕ್ಷದ ಪರ ನಿಂತು ತೊಂದರೆ ಅನುಭವಿಸಿದ ತ್ಯಾಗಮಯಿ ಪೋಸ್ ನೀಡಲು ಅವಕಾಶ

-ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಅತ್ಯಾಪ್ತರಾಗಲು ಅವಕಾಶ

-ಸಿದ್ದರಾಮಯ್ಯ ಆಪ್ತ ಸಚಿವರು ಸೇರಿ ಬಹುತೇಕ ಎಲ್ಲರೂ ಗುಜರಾತ್ ಶಾಸಕರಿಗೆ ಆತಿಥ್ಯ ನೀಡಲು ಹಿಂಜರಿದಾಗ ಬೆನ್ನಿಗೆ ನಿಂತಿದ್ದು, ಪಕ್ಷ ನಿಷ್ಠೆಯ ಪರಾಕಾಷ್ಠೆ ಎಂಬಂತೆ ಬಿಂಬಿಸಬಹುದು.

-ರಾಜ್ಯ ಕಾಂಗ್ರೆಸ್‌ನ ಭವಿಷ್ಯದ ಗಟ್ಟಿ ನಾಯಕ ಎಂಬ ಸ್ಥಾನವನ್ನು ಬಲಪಡಿಸಿಕೊಳ್ಳಲು ಈ ಸಂದ‘ರ್ ಬಳಸಿಕೊಳ್ಳಬಹುದು. ರಾಷ್ಟ್ರಮಟ್ಟದಲ್ಲಿ ಮಿಂಚಿ ತಮ್ಮ ಬಯಕೆಯ ಖಾತೆ ಹಾಗೂ ಸ್ಥಾನ ಈಗ ಅನಾಯಾಸವಾಗಿ ದೊರೆಯಬಹುದು.

-ಐಟಿ ದಾಳಿಯಿಂದ ಡಿಕೆಶಿ ವ್ಯವಹಾರದ ಸಾಕಷ್ಟು ‘ಗೌಪ್ಯ’ ದಾಖಲೆಗಳು ಬಹಿರಂಗಗೊಳ್ಳಬಹುದು -ದಾಖಲೆಗಳು ಸೃಷ್ಟಿಸುವ ಅವಾಂತರಗಳನ್ನು ನಿಭಾಯಿಸುವುದು ಡಿಕೆಶಿಗೆ ಕಷ್ಟವಾಗಬಹುದು

-ಮೋದಿ ಹಾಗೂ ಅಮಿತ್ ಶಾ ಅವರ ನೇರ ಟಾರ್ಗೆಟ್ ಡಿಕೆಶಿ ಆಗಿರುವ ಕಾರಣ ಹಳೆಯ ‘ಭ್ರಷ್ಟಾಚಾರ ಪ್ರಕರಣಗಳಿಗೆ ಹೊಸ ಜೀವ ನೀಡುವ ಸಾಧ್ಯತೆ

-ಆದಾಯ ಇಲಾಖೆ ದಾಳಿಯು ಹೈಕಮಾಂಡ್‌ಗೆ ತಮ್ಮನ್ನು ಆಪ್ತರನ್ನಾಗಿಸಿದರೂ, ತಮ್ಮ ವಿರುದ್ಧವಿರುವ ರಾಜ್ಯ ನಾಯಕರು ಮತ್ತಷ್ಟು ಒಗ್ಗಟಾಗುವ ಅಪಾಯ ಸೃಷ್ಟಿ

-ಐಟಿ ದಾಳಿಯಲ್ಲಿ ಕೇಂದ್ರ ಪಟ್ಟು ಹಿಡಿದು ತಮ್ಮನ್ನು ಕಳಂಕಿತ ಎಂದು ಬಿಂಬಿಸಿ ಜೈಲು ವಾಸದ ಸಾಧ್ಯತೆ ಸೃಷ್ಟಿಸಿದರೆ ಆಗ ರಾಜಕೀಯ ಜೀವನವೇ ಅಪಾಯಕ್ಕೆ

-ಅಹಿಂದ ಮತ ಬ್ಯಾಂಕ್ ತಮ್ಮ ಪರ ಇರುವುದರಿಂದ ಸದ್ಯಕ್ಕೆ ಸಿದ್ದರಾಮಯ್ಯಗೆ ಅಪಾಯವಿಲ್ಲ. ಈ ಪ್ರಕರಣದಲ್ಲಿ ಡಿಕೆಶಿ ಗೆದ್ದ ನಂತರ ಮತ್ತೊಂದು ಪವರ್ ಸೆಂಟರ್ ನಿರ್ಮಾಣ ಆದಂತೆಯೇ ಸರಿ.

-ಹಾಲಿ ಶಿವಕುಮಾರ್ ತಂತ್ರಗಳನ್ನು ಸುಲಭವಾಗಿ ನಿಭಾಯಿಸಲು ಸಿದ್ದರಾಮಯ್ಯ ಬಣಕ್ಕೆ ಸಾಧ್ಯ್ಯವಾಗುತ್ತಿದೆ. ಆದರೆ, ‘ವಿಷ್ಯದಲ್ಲಿ ಡಿಕೆಶಿ ಗೆದ್ದರೆ ಅವರನ್ನು ನಿಭಾಯಿಸುವುದು ಕಷ್ಟಸಾಧ್ಯ.