‘IT ದಾಳಿ ಬಳಿಕ ವ್ಯವಹಾರ ಏರಿಳಿತ : ನೋವನ್ನು ಯಾರ ಬಳಿಯೂ ಹೇಳುತ್ತಿರಲಿಲ್ಲ’
ಉದ್ಯಮಿ ಸಿದ್ಧಾರ್ಥ ಅವರು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ. ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಹಲವು ನೋವನ್ನು ಹೊಂದಿದ್ದ ಅವರು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ ಎಂದು ಸೋದರ ಸಂಬಂಧಿಯೋರ್ವರು ಹೇಳಿದ್ದಾರೆ.
ಬೆಂಗಳೂರು [ಜು.31]: ಕಾಫಿ ಡೇ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ್ದ ಸಿದ್ಧಾರ್ಥ ಅವರು ನೇತ್ರಾವತಿ ನದಿಯಲ್ಲಿ ತಮ್ಮ ಜೀವನ ಕೊನೆಗೊಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಕಾಫಿ ಸಾಮ್ರಾಜ್ಯವನ್ನು ತೊರೆದಿದ್ದಾರೆ.
ಐಟಿ ದಾಳಿಯ ಶಾಕ್ ಸಹ ಸಿದ್ಧಾರ್ಥ ಸಾವಿಗೆ ಪ್ರಮುಖ ಕಾರಣವಾಗಿತ್ತು ಎಂದು ಅವರ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಿದ್ಧಾರ್ಥ ಅವರ ಸೋದರ ಸಂಬಂಧಿಯಾಗಿದ್ದ ಪ್ರಸನ್ನ ಅವರು ಗಂಭೀರ ಆರೋಪ ಮಾಡಿದ್ದು, ಐಟಿ ದಾಳಿಯಾದ ನಂತರ ಅವರ ವ್ಯವಹಾರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಏರಿಳಿತ ಉಂಟಾಗಿತ್ತು ಎಂದು ಹೇಳಿದ್ದಾರೆ.
ಕಾಫಿ ಸಾಮ್ರಾಟನ ದುರಂತ ಅಂತ್ಯ: 'ಕಾಣದ ಕೈಗಳ' ಸೂಕ್ತ ತನಿಖೆಗೆ ಗಣ್ಯರ ಆಗ್ರಹ!
ಎಷ್ಟೇ ಪ್ರಮಾಣದಲ್ಲಿ ನೋವು ಇದ್ದರೂ ಅದನ್ನು ಯಾರೊಂದಿಗೂ ಹೇಳಿಕೊಳ್ಳುತ್ತಿರಲಿಲ್ಲ ಎಂದು ಸುವರ್ಣ ನ್ಯೂಸ್.ಕಾಂ ಗೆ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಸಿದ್ಧಾರ್ಥ ಅವರ ತಂದೆಗೆ ಗೊತ್ತಿಲ್ಲ ಮಗನ ಸಾವಿನ ಸುದ್ದಿ
ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಕಾಫಿ ಸಾಮ್ರಾಜ್ಯದ ಕಿಂಗ್ ಆಗಿದ್ದ ಸಿದ್ಧಾರ್ಥ್ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬೆಳೆದರು. ಆದರೆ ಇತ್ತೀಚಿನ ವ್ಯವಹಾರದ ಏರಿಳಿತ ಅವರನ್ನು ಆತ್ಮಹತ್ಯೆವರೆಗೂ ಕೊಂಡೊಯ್ದು ಜು.29 ರಂದು ಸಂಜೆ ವೇಳೆ ನೇತ್ರಾವತಿ ನದಿಗೆ ಹಾರಿ ಜೀವನ ಕೊನೆಗೊಳಿಸಿದರು.