ರೇಡ್ ಆದ ಇತರ ಎರಡು ಮನೆಗಳು ನಾಗರಾಜ್ ಮತ್ತು ತಿಪ್ಪೇಸ್ವಾಮಿ ಅವರಿಗೆ ಸೇರಿದ್ದಾಗಿದೆ. ಇವರಿಬ್ಬರೂ ಕೂಡ ದೊಡ್ಡಣ್ಣನವರ ಅಳಿಯ ವೀರೇಂದ್ರ ಅವರ ಸೋದರರೆನ್ನಲಾಗಿದೆ. ಉದ್ಯಮಿಯಾಗಿರುವ ವೀರೇಂದ್ರ ಅವರು ಜೆಡಿಎಸ್ ಮುಖಂಡರೂ ಆಗಿದ್ದಾರೆ.

ಚಿತ್ರದುರ್ಗ(ಡಿ. 10): ಕೇಂದ್ರ ಅದಾಯ ತೆರಿಗೆ ಅಧಿಕಾರಿಗಳು ಚಳ್ಳಕೆರೆಯಲ್ಲಿ ಚಿತ್ರನಟ ದೊಡ್ಡಣ್ಣನವರ ಅಳಿಯ ವೀರೇಂದ್ರ ಅವರ ನಿವಾಸ ಸೇರಿದಂತೆ ಮೂವರು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಒಂದೇ ಮನೆಯಲ್ಲಿ 5.7 ಕೋಟಿ ಮೌಲ್ಯದ ಹೊಸ ಕರೆನ್ಸಿ ಹಾಗೂ 90 ಲಕ್ಷ ಮೌಲ್ಯದ 100 ಮತ್ತು 20 ಮುಖಬೆಲೆಯ ನೋಟುಗಳು ಸಿಕ್ಕಿವೆ ಎನ್ನಲಾಗಿದೆ. ಮನೆಯ ಬಾತ್'ರೂಮಿನ ಸೀಕ್ರೆಟ್ ಛೇಂಬರ್'ನಲ್ಲಿ ಈ ಹಣವನ್ನು ಅಟಗಿಸಿಡಲಾಗಿತ್ತು. ನಗದು ಹಣದ ಜೊತೆಗೆ 4 ಕಿಲೋ ಚಿನ್ನಾಭರಣಗಳು ಹಾಗೂ ವಿವಿಧ ದಾಖಲೆಪತ್ರಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ರೇಡ್ ಆದ ಇತರ ಎರಡು ಮನೆಗಳು ನಾಗರಾಜ್ ಮತ್ತು ತಿಪ್ಪೇಸ್ವಾಮಿ ಅವರಿಗೆ ಸೇರಿದ್ದಾಗಿದೆ. ಇವರಿಬ್ಬರೂ ಕೂಡ ದೊಡ್ಡಣ್ಣನವರ ಅಳಿಯ ವೀರೇಂದ್ರ ಅವರ ಸೋದರರೆನ್ನಲಾಗಿದೆ. ಉದ್ಯಮಿಯಾಗಿರುವ ವೀರೇಂದ್ರ ಅವರು ಜೆಡಿಎಸ್ ಮುಖಂಡರೂ ಆಗಿದ್ದಾರೆ.

ಇದೇ ವೇಳೆ, ಈ ಮೂರು ಮನೆಗಳು ಸೇರಿದಂತೆ ಐಟಿ ಅಧಿಕಾರಿಗಳು ಕರ್ನಾಟಕ ಹಾಗೂ ಗೋವಾಗಳಲ್ಲಿ 15 ಕಡೆ ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಕೆಲ ಮನೆಗಳ ಮೇಲೂ ರೇಡ್ ಆಗಿದೆ. ಹವಾಲಾ ಆಪರೇಟರ್ಸ್ ಮತ್ತು ಷೇರು ದಲ್ಲಾಳಿಗಳನ್ನು ಟಾರ್ಗೆ ಮಾಡಿ ಐಟಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆನ್ನಲಾಗಿದೆ.