ಬೆಂಗಳೂರು : ಸ್ಯಾಂಡಲ್ ವುಡ್ ಮೇಲೆ ಐಟಿ ಅಧಿಕಾರಿಗಳ ದಾಳಿ ಮುಂದುವರಿದಿದೆ. ಕಳೆದ ಮೂರು ದಿನಗಳಿಂದಲೂ ನಿರಂತರವಾಗಿ ಶೋಧ  ಕಾರ್ಯ ಮುಂದುವರಿದಿದೆ. 

ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಇಂದೂ ಕೂಡ ಐಟಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.  ತಡರಾತ್ರಿವರೆಗೂ ಕೂಡ ಪರಿಶೀಲನೆ ನಡೆಸಿದ ಅಧಿಕಾರಿಗಳು ಇಂದು ಮುಂದುವರಿದಿದೆ. 

ತಡರಾತ್ರಿವರೆಗೂ ಪರಿಶೀಲನೆ ನಡೆಸಿದ ಐಟಿ ಅಧಿಕಾರಿಗಳು ಯಶ್ ಮನೆಯಲ್ಲೇ ಉಳಿದುಕೊಂಡಿದ್ದರು. ಇಬ್ಬರು ಮಹಿಳಾ ಅಧಿಕಾರಿಗಳೂ ಕೂಡ ಇಲ್ಲಿಯೇ ನೆಲೆಸಿದ್ದರು.  

ಶನಿವಾರವೂ ಕೂಡ ಯಶ್ ಮನೆಯಲ್ಲಿ ಪರಿಶೀಲನೆ ನಡೆಸಲಿರುವ ಅಧಿಕಾರಿಗಳು ಯಶ್ ತಾಯಿ ಮತ್ತು ಯಶ್ ಅವರನ್ನು ವಿಚಾರಣೆ ನಡೆಸಿದ್ದಾರೆ.