ಇಂಧನ ಸಚಿವ ಡಿ ಕೆ ಶಿವಕುಮಾರ್ ಮನೆ ಮೇಲೆ ಐಟಿ ರೈಡ್ ಆಗಿ ಎರಡು ತಿಂಗಳುಗಳು ಕಳೆದು ಹೋದರೂ ಸಚಿವರಿಗೆ ಐಟಿ ಬಿಸಿ ಮಾತ್ರ ಇನ್ನೂ ತಪ್ಪಿಲ್ಲ. ಡಿಕೆಶಿ ಮನೆಯಲ್ಲಿ ಸಿಕ್ಕ ಆಸ್ತಿ ಪಾಸ್ತಿಗಳ ಪರಿಶೀಲನೆ ನಡೆಸಿರೋ ಐಟಿ ಅಧಿಕಾರಿಗಳು ಪ್ರತಿಯೊಂದು ಆದಾಯಕ್ಕೂ ಲೆಕ್ಕ ನೀಡುವಂತೆ ಕಚೇರಿಗೆ ಕರೆಸಿ ಹೇಳಿದ್ದಾರೆ.
ಬೆಂಗಳೂರು (ಅ.05): ಇಂಧನ ಸಚಿವ ಡಿ ಕೆ ಶಿವಕುಮಾರ್ ಮನೆ ಮೇಲೆ ಐಟಿ ರೈಡ್ ಆಗಿ ಎರಡು ತಿಂಗಳುಗಳು ಕಳೆದು ಹೋದರೂ ಸಚಿವರಿಗೆ ಐಟಿ ಬಿಸಿ ಮಾತ್ರ ಇನ್ನೂ ತಪ್ಪಿಲ್ಲ. ಡಿಕೆಶಿ ಮನೆಯಲ್ಲಿ ಸಿಕ್ಕ ಆಸ್ತಿ ಪಾಸ್ತಿಗಳ ಪರಿಶೀಲನೆ ನಡೆಸಿರೋ ಐಟಿ ಅಧಿಕಾರಿಗಳು ಪ್ರತಿಯೊಂದು ಆದಾಯಕ್ಕೂ ಲೆಕ್ಕ ನೀಡುವಂತೆ ಕಚೇರಿಗೆ ಕರೆಸಿ ಹೇಳಿದ್ದಾರೆ.
ಡಿಕೆಶಿ ಮನೆಯಲ್ಲಿ ಸಿಕ್ಕ ಆಸ್ತಿಪಾಸ್ತಿಗಳ ದಾಖಲೆಗಳು, ಕಾಗದ ಪತ್ರಗಳನ್ನ ಪರಿಶೀಲನೆ ನಡೆಸಿರೋ ಐಟಿ ಆದಿಕಾರಿಗಳು ಇಂಚಿಂಚೂ ಆದಾಯದ ಮೂಲಗಳನ್ನ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ. ಐಟಿ ಆಧಿಕಾರಿಗಳ ತನಿಖೆ ವೇಳೆ ಆದಾಯಕ್ಕೂ ಹೆಚ್ಚು ಆಸ್ತಿ ಪತ್ತೆಯಾಗಿರುವುದಕ್ಕೆ ಐಟಿ ಅಧಿಕಾರಿಗಳು ದಾಖಲೆಗಳನ್ನ ಕೇಳಿ ಸಚಿವ ಡಿಕೆಶಿಗೆ ಸಮನ್ಸ್ ನೀಡಿದ್ದರು. ಐಟಿ ಸಮನ್ಸ್ಗೆ ನೀಡಿದ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ಕ್ವೀನ್ಸ್ ರಸ್ತೆಯ ಐಟಿ ಕಚೇರಿಗೆ ದಾಖಲೆಗಳನ್ನ ಸಮೇತ ಆಗಮಿಸಿದರು.
ಇಂದು ಬೆಳಗ್ಗೆ 11.45 ಕ್ಕೆ ಐಟಿ ಕಚೇರಿಗೆ ಆಗಮಿಸಿದ ಡಿಕೆಶಿ ಒಂದಷ್ಟು ಕಡತಗಳನ್ನ ಜೊತೆಯಲ್ಲಿ ತಂದಿದ್ದರು. ಐಟಿ ಆಧಿಕಾರಿಗಳ ಪರಿಶೀಲನೆಯಲ್ಲಿ ಕಂಡು ಬಂದ ಕೆಲವು ಆಸ್ತಿ ಪತ್ರಗಳು, ಆದಾಯದ ಮೂಲಗಳ ಡಿಕೆಶಿ ತಂದಿದ್ದ ಪತ್ರಗಳೊಂದಿಗೆ ಪರಿಶೀಲನೆ ನಡೆಸಿದರು. ಸುಮಾರು ಮೂರು ಗಂಟೆಗಳ ಕಾಲ ಐಟಿ ಅಧಿಕಾರಿಗಳು ಡಿ ಕೆ ಶಿವಕುಮಾರ್ ಅವರು ತಂದಿದ್ದ ದಾಖಲೆಗಳನ್ನ ಪರಿಶೀಲನೆ ನಡೆಸಿದರು. ನಂತರ ಮಾತಾನಾಡಿದ ಡಿಕೆಶಿ ಐಟಿ ಆದಿಕಾರಿಗಳು ಕೆಲವು ಆಸ್ತಿಗಳಿಗೆ ಸಂಬಂಧಿಸಿದಂತೆ ಸಮನ್ಸ್ ನೀಡಿದ್ದರು. ಅದರಂತೆ ಇಂದು ಹಾಜರಾಗಿ ದಾಖಲೆಗಳನ್ನ ನೀಡಿದ್ದೇನೆ ಅಂದರು.
ಅಲ್ಲದೇ ಇನ್ನೂ ಕೆಲವು ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವ ಕಾರ್ಯ ಬಾಕಿಯಿದ್ದು, ಮತ್ತೊಮ್ಮೆ ಬರಲು ಐಟಿ ಆಧಿಕಾರಿಗಳು ನೀಡೋ ಸಾದ್ಯತೆ ಇದೆ. ಸದ್ಯ ಐಟಿ ದಾಳಿ ಮುಗಿದಿದ್ದರೂ ಅದರ ಬಿಸಿ ಮಾತ್ರ ಇನ್ನೂ ಮಾಸಿಲ್ಲ. ಐಟಿ ಆಧಿಕಾರಿಗಳು ತನಿಖೆ ಹಾಗೂ ಕಡತಗಳ ಪರಿಶೀಲನೆ ಹಿನ್ನೆಲೆಯಲ್ಲಿ ಡಿಕೆಶಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದು ಡಿಕೆಶಿಗೆ ತಲೆನೋವಾಗಿ ಪರಿಣಮಿಸಿದರೆ ಅಚ್ಚರಿಯಿಲ್ಲ.
