ಪ್ರಧಾನಿ ನರೇಂದ್ರ ಮೋದಿ ಆಧುನೀಕತೆಗೆ, ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಾರೆನ್ನುವುದು ಗೊತ್ತಿರುವ ವಿಚಾರವೇ. ಸುಪ್ರೀಂಕೋರ್ಟ್’ನ ನೂತನ ಡಿಜಿಟಲ್ ವ್ಯವಸ್ಥೆಗೆ ಚಾಲನೆ ನೀಡಿ ಇಂದು ಒಂದು ಹೊಸ ಸಮೀಕರಣವನ್ನು ನೀಡಿದ್ದಾರೆ.
ನವದೆಹಲಿ (ಮೇ.10): ಪ್ರಧಾನಿ ನರೇಂದ್ರ ಮೋದಿ ಆಧುನೀಕತೆಗೆ, ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಾರೆನ್ನುವುದು ಗೊತ್ತಿರುವ ವಿಚಾರವೇ. ಸುಪ್ರೀಂಕೋರ್ಟ್’ನ ನೂತನ ಡಿಜಿಟಲ್ ವ್ಯವಸ್ಥೆಗೆ ಚಾಲನೆ ನೀಡಿ ಇಂದು ಒಂದು ಹೊಸ ಸಮೀಕರಣವನ್ನು ನೀಡಿದ್ದಾರೆ.
IT+IT=IT ಎಂದು ವರ್ಣಿಸಿದ್ದಾರೆ. ಅಂದರೆ Information Technology+Indian Talent= India Tommorrow ಎಂದು ಸಮಜಾಯಿಷಿ ನೀಡಿದ್ದಾರೆ.
ದೇಶವು ಹೆಚ್ಚು ಹೆಚ್ಚು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಸರ್ಕಾರದ ಲಾಭವನ್ನು ಪಡೆಯಲು ಎಲ್ಲಾ ವರ್ಗದ ಜನರು ತಂತ್ರಜ್ಞಾನವನ್ನು ಬಳಸಬೇಕು. ಕೆಲವೇ ಕೆಲವು ವ್ಯಕ್ತಿಗಳು ಬಳಸುವುದರಿಂದ ಇದು ಸಾಧ್ಯವಾಗುವುದಿಲ್ಲ.ದೊಡ್ಡ ಪ್ರಮಾಣದಲ್ಲಿ ಬಳಸಲು ಪ್ರಾರಂಭಿಸಬೇಕೆಂದು ಮೋದಿ ಹೇಳಿದ್ದಾರೆ.
ಇ-ಆಡಳಿತ ಸುಲಭ ಹಾಗೂ ಪರಿಣಾಮಕಾರಿ. ಇದು ಪರಿಸರ ಸ್ನೇಹಿ ಕೂಡಾ ಹೌದು. ಪೇಪರ್ ರಹಿತ ಆಡಳಿತದಿಂದ ಪರಿಸರಕ್ಕೆ ಅನುಕೂಲವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು ಸುಪ್ರೀಂಕೋರ್ಟ್ ನ ಐಸಿಎಂಐಎಸ್ ಡಿಜಿಟಲ್ ಸೇವೆಗೆ ಚಾಲನೆ ನೀಡಿದರು. ಇನ್ಮುಂದೆ ಜನರು ದೂರುಗಳನ್ನು ಆನ್’ಲೈನ್ ಮೂಲಕ ನೀಡಬಹುದು.
