Asianet Suvarna News Asianet Suvarna News

ಹೊಸ ವಿಶ್ವದಾಖಲೆಯ ಸನ್ನಾಹದಲ್ಲಿ ಇಸ್ರೋ; ಒಂದೇ ರಾಕೆಟ್'ನಲ್ಲಿ 83 ಉಪಗ್ರಹಗಳ ಉಡಾವಣೆಗೆ ಸಜ್ಜು

ರಷ್ಯಾದ ಡಿಎನ್'ಇಪಿಆರ್ ರಾಕೆಟ್ 2014ರಲ್ಲಿ 37 ಉಪಗ್ರಹಗಳನ್ನು ಒಮ್ಮೆಗೇ ಉಡಾವಣೆ ಮಾಡಿದ್ದು ಈವರೆಗಿನ ದಾಖಲೆಯಾಗಿ ಉಳಿದುಕೊಂಡಿದೆ.

isro to make world record by launching 83 satellites in one rocket

ನವದೆಹಲಿ(ಅ. 30): ಚಂದ್ರಯಾನ, ಮಂಗಳಯಾನಗಳನ್ನು ಯಶಸ್ವಿಯಾಗಿ ನಡೆಸಿ ವಿಶ್ವಮಟ್ಟದಲ್ಲಿ ದಿನದಿಂದ ದಿನಕ್ಕೆ ಪ್ರಬಲಗೊಳ್ಳುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಅಣಿಯಾಗಿದೆ. ಒಂದೇ ರಾಕೆಟ್'ನಲ್ಲಿ 83 ಸೆಟಿಲೈಟ್'ಗಳ ಉಡಾವಣೆ ಮಾಡಲು ಇಸ್ರೋ ಸಜ್ಜಾಗಿದೆ. 2017ರ ಆರಂಭದಲ್ಲಿ, ಅಂದರೆ ಇನ್ನು ನಾಲ್ಕೈದು ತಿಂಗಳಲ್ಲಿ ಈ ಮಹತ್ವದ ಯೋಜನೆ ಕೈಗೂಡಲಿದೆ ಎಂದು ಆಂಟ್ರಿಕ್ಸ್ ಕಾರ್ಪೊರೇಶನ್ ಸಂಸ್ಥೆಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಉಡಾವಣೆಗೊಳ್ಳಲಿರುವ 83 ಉಪಗ್ರಹಗಳ ಪೈಕಿ 81 ವಿದೇಶೀಯರದ್ದಾಗಿದೆ. ಬಹುತೇಕ ಉಪಗ್ರಹಗಳು ಬಹಳ ಪುಟ್ಟ ನ್ಯಾನೋ ಸೆಟಿಲೈಟ್'ಗಳಾಗಿರಲಿವೆ. ಎಲ್ಲಾ 83 ಉಪಗ್ರಹಗಳು ಒಂದೇ ಕಕ್ಷೆಗೆ ಸೇರುವಂಥವು. ಎಲ್ಲಾ ಸೆಟಿಲೈಟ್'ಗಳು ರಾಕೆಟ್'ನಿಂದ ಬೇರ್ಪಟ್ಟು ಕಕ್ಷೆಗೆ ಸೇರುವವರೆಗೂ ರಾಕೆಟ್'ನಲ್ಲಿ ಅದೇ ಕಕ್ಷೆಯಲ್ಲಿ ಉಳಿಸಿಕೊಳ್ಳುವ ಕೆಲಸ ಇಲ್ಲಿ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಇಸ್ರೋದ ಈ ಸಾಹಸ ಬಹಳ ಗಮನಾರ್ಹವಾದುದು ಹಾಗೂ ಕ್ಷಿಷ್ಟಕರವಾದುದು ಎನ್ನುತ್ತಾರೆ ವಿಜ್ಞಾನಿಗಳು.

ವಿಶ್ವದಾಖಲೆ:
ರಷ್ಯಾದ ಡಿಎನ್'ಇಪಿಆರ್ ರಾಕೆಟ್ 2014ರಲ್ಲಿ 37 ಉಪಗ್ರಹಗಳನ್ನು ಒಮ್ಮೆಗೇ ಉಡಾವಣೆ ಮಾಡಿದ್ದು ಈವರೆಗಿನ ದಾಖಲೆಯಾಗಿ ಉಳಿದುಕೊಂಡಿದೆ. ಸ್ಪೇಸ್'ಎಕ್ಸ್ ಸಿಆರ್'ಎಸ್-3 ಫ್ಲೈಟ್ ಎಂಬ ಖಾಸಗಿ ಸಂಸ್ಥೆಯ ರಾಕೆಟ್ಟು 2014ರಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಪ್ರಯತ್ನದಲ್ಲಿ ವಿಫಲಗೊಂಡಿತ್ತು.

Follow Us:
Download App:
  • android
  • ios