ಮುಂಬೈ[ಡಿ.14]: ಮುಕೇಶ್ ಹಾಗೂ ನೀತಾ ಅಂಬಾನಿಯ ಮುದ್ದಿನ ಮಗಳು ಇಶಾ ಅಂಬಾನಿ ಹಾಗೂ ಅಜಯ್ ಪೀರಾಮಲ್ ಮಗ ಆನಂದ್ ಪೀರಾಮಲ್ ಡಿ. 12ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮುಂಬೈನಲ್ಲಿರುವ ಮುಕೇಶ್ ಅಂಬಾನಿಯ ಮನೆ ಆ್ಯಂಟಿಯಾದಲ್ಲಿ ಈ ಮದುವೆ ಅದ್ಧೂರಿಯಾಗಿ ನೆರವೇರಿದೆ. ಈ ಮದುವೆಯಲ್ಲಿ ಬಾಲಿವುಡ್, ರಾಜಕೀಯ ಹಾಗೂ ಉದ್ಯಮ ಕ್ಷೇತ್ರದ ಗಣ್ಯರ ದಂಡೇ ಪಾಲ್ಗೊಂಡಿತ್ತು. ಮಧ್ಯಾಹ್ನ 3 ಗಂಟೆಗೆ ಮದುವೆ ದಿಬ್ಬಣ ಬಂದ ಬಳಿಕ ಮದುವೆ ಸಂಭ್ರಮ ಕಳೆಗಟ್ಟಿತ್ತು. ಅಂಬಾನಿ ಮಕ್ಕಳಾದ ಅನಂತ್ ಹಾಗೂ ಆಕಾಶ್‌ರೊಂದಿಗೆ, ಆಕಾಶ್ ಜೊತೆ ನಿಶ್ಚಿತಾರ್ಥವಾಗಿರುವ ಶ್ಲೋಕಾ ಮೆಹ್ತಾ ಕೂಡಾ ದಿಬ್ಬಣವನ್ನು ಸ್ವಾಗತಿಸಿದ್ದಾರೆ. ಆದರೆ ಇದಾದ ಬಳಿಕ ನಡೆದ ಸಂಭ್ರಮದಲ್ಲಿ ಮಾತ್ರ ಮುಕೇಶ್ ಅಂಬಾನಿ ಬಹಳಷ್ಟು ಭಾವುಕರಾಗಿರುವುದು ಕಂಡು ಬಂದಿದೆ.

ಭಾರತದ ನಂ.1 ಶ್ರೀಮಂತನ ಮನೆ ಮದ್ವೆಯಲ್ಲಿ ಕಡು ಬಡವರಿಗೂ ಊಟ!

ಈ ಸಂಭ್ರಮವನ್ನು ಎಲ್‌ಇಡಿ ಸ್ಕ್ರೀನ್ ಮೂಲಕ ಪ್ರಸಾರ ಮಾಡುವ ಮೂಲಕ ಆಗಮಿಸಿದ ಎಲ್ಲಾ ಅತಿಥಿಗಳಿಗೆ ಇಶಾ ಮದುವೆ ನೋಡುವ ಅವಕಾಶ ಮಾಡಿಕೊಡಲಾಗಿತ್ತು. ನೀತಾ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಕೂಡಾ ದೂರದಿಂದಲೇ ಈ ಸಂಭ್ರಮವನ್ನು ವೀಕ್ಷಿಸುತ್ತಿದ್ದರು. ಆದರೆ ಇಶಾ ಕೊರಳಿಗೆ ಅಜಯ್ ಮಾಲೆ ಹಾಕುವ ವೇಳೆ ಇಬ್ಬರೂ ಭಾವುಕರಾಗಿದ್ದಾರೆ. ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಈ ದೃಶ್ಯಗಳು ಸ್ಪಷ್ಟವಾಗಿ ಕಂಡು ಬಂದಿವೆ. 

 
 
 
 
 
 
 
 
 
 
 
 
 

#ishaambani

A post shared by Shloka Mehta (@shloka_mehta_official) on Dec 12, 2018 at 10:26am PST

ಅಂಬಾನಿ ಮನೆ ಮದುವೆಯಲ್ಲಿ ಡ್ರೆಸ್ ಕೋಡ್ ಹೇಗಿದೆ..?

ಮುದ್ದಿನ ಮಗಳ ಮದುವೆಯನ್ನು ಅದ್ಧೂರಿಯಾಗಿಯೇ ಮಾಡಿರುವ ಮುಕೇಶ್ ಅಂಬಾನಿ, ಮಗಳು ಇಶಾ ಹಾಗೂ ಆನಂದ್‌ರನ್ನು ಆಶೀರ್ವದಿಸಲು ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಪತ್ನಿ ಹಿಲರಿ ಕ್ಲಿಂಟನ್, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ದಿಗ್ಗಜ ನಟರಾದ ಅಮಿತಾಬ್ ಬಚ್ಚನ್, ರಜನೀಕಾಂತ್, ಅಮೀರ್ ಖಾನ್, ಸಲ್ಮಾನ್ ಖಾನ್, ಶಾರುಕ್ ಖಾನ್ ಸೇರಿದಂತೆ ಹಲವಾರು ಗಣ್ಯರನ್ನು ಆಹ್ವಾನಿಸಿದ್ದರು.

 
 
 
 
 
 
 
 
 
 
 
 
 

Meet the newlyweds #ishaambani and #anandpiramal

A post shared by BollywoodLife (@ibollywoodlife) on Dec 12, 2018 at 8:37am PST

ವಿದ್ಯುತ್ ದೀಪ ಹಾಗೂ ಹೂವುಗಳಿಂದ ಕಂಗೊಳಿಸುತ್ತಿತ್ತು 27 ಅಂತಸ್ತಿನ ಆ್ಯಂಟಿಲಿಯಾ

ಮಗಳ ಮದುವೆಗಾಗಿ ಮುಕೇಶ್ ಅಂಬಾನಿ ಮನೆ ಆ್ಯಂಟಿಲಿಯಾವನ್ನು ಮದುಮಗಳಂತೆ ಸಿಂಗಾರಗೊಳಿಸಲಾಗಿತ್ತು. ಗ್ರೌಂಡ್ ಫ್ಲೋರ್ ನಲ್ಲಿ ಮಂಡಲ ತಯಾರಿಸಿದ್ದರೆ, ಪ್ರವೇಶ ದ್ವಾರದಲ್ಲಿ ಮರಗಳಿಗೆ ಹೂವಿನ ಹಾರಗಳನ್ನು ಹಾಕಿ ಶೃಂಗಾರ ಮಾಡಲಾಗಿತ್ತು. ಮನೆಯನ್ನು ಡೆಕೊರೇಟ್ ಮಾಡುವ ಕಾರ್ಯ ಒಂದು ವಾರದ ಹಿಂದೆಯೇ ಆರಂಭಿಸಲಾಗಿತ್ತು.