ಸಿಎಂ ಹುದ್ದೆಗಾಗಿ ಮೋದಿಗೆ ಪರ್ರಿಕರ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಜೈಪಾಲ್ ರೆಡ್ಡಿ ಕೀಳು ಟೀಕೆ
ಪಣಜಿ[ಡಿ.22]: ಗೋವಾ ಸಿಎಂ ಮನೋಹರ್ ಪರ್ರಿಕರ್ ಜಿಗಣೆ ರೀತಿ ಸಿಎಂ ಹುದ್ದೆಗೆ ಅಂಟಿಕೊಂಡಿದ್ದಾರೆ. ಹುದ್ದೆಯಲ್ಲಿ ಮುಂದುವರೆಯುವ ಕಾರಣಕ್ಕಾಗಿಯೇ ಅವರು ರಫೇಲ್ ಖರೀದಿ ವಿಷಯವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ಕೀಳು ಆರೋಪ ಮಾಡಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿರುವ ಪರ್ರಿಕರ್ ಅವರ ಬಗ್ಗೆ ರಾಜಕೀಯ ಕಾರಣಕ್ಕಾಗಿ ರೆಡ್ಡಿ ಮಾಡಿದ ಆರೋಪಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಫೇಲ್ ಕೇಸಲ್ಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕ್ಲಿನ್‌ಚಿಟ್ ಕೊಟ್ಟಿದ್ದರೂ, ಕಾಂಗ್ರೆಸ್ ಇನ್ನೂ ಹಗರಣದ ಜಪ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
