Asianet Suvarna News Asianet Suvarna News

ಲಂಕಾ ಸ್ಫೋಟ ರೂವಾರಿ ತಮಿಳುನಾಡಿನಲ್ಲಿ ಸೆರೆ

ಶ್ರೀಲಂಕಾದ ಸರಣಿ ಸ್ಫೋಟದ ರೂವಾರಿ ಎನ್ನಲಾದ ಐಸಿಸ್ ಸಂಘಟನೆಯ ತಮಿಳುನಾಡಿನ ಮುಖ್ಯಸ್ಥನನ್ನು ಖಚಿತ ಮಾಹಿತಿ ಮೇರೆಗೆ ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ.

IS head of Tamilnadu module arrested in Coimbatore
Author
Bengaluru, First Published Jun 13, 2019, 9:45 AM IST

ನವದೆಹಲಿ: ತಮಿಳುನಾಡಿನಲ್ಲಿ ಐಸಿಸ್‌ ಉಗ್ರ ಸಂಘಟನೆಯ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಮ್ಮದ್‌ ಅಜರುದ್ದೀನ್‌ ಎಂಬಾತನನ್ನು ಎನ್‌ಐಎ ಬುಧವಾರ ತಮಿಳುನಾಡಿನಲ್ಲಿ ಬಂಧಿಸಿದೆ. ಖಚಿತ ಮಾಹಿತಿ ಮೇರೆಗೆ ತಮಿಳುನಾಡಿನ ಕೊಯಮತ್ತೂರಿನ ವಿವಿಧ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳ ತಂಡ ಅಜರುದ್ದೀನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈತ, ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಸರಣಿಸ ಫೋಟ ಪ್ರಕರಣದ ರೂವಾರಿ ಎನ್ನಲಾದ ಝಹ್ರಾನ್‌ ಹಶೀಮ್‌ ಜೊತೆ ಫೇಸ್‌ಬುಕ್‌ ಸ್ನೇಹಿತನಾಗಿದ್ದ.

IS head of Tamilnadu module arrested in Coimbatore

ದಾಳಿ ವೇಳೆ ಎನ್‌ಐಎ ಅಧಿಕಾರಿಗಳು 14 ಮೊಬೈಲ್‌, 29 ಸಿಮ್‌ಕಾರ್ಡ್‌, 10 ಪೆನ್‌ಡ್ರೈವ್‌, 3 ಲ್ಯಾಪ್‌ಟಾಪ್‌, 6 ಮೆಮೊರಿ ಕಾರ್ಡ್‌, 4 ಹಾರ್ಡ್‌ಡಿಸ್ಕ್‌, 13 ಸಿಡಿ/ ಡಿವಿಸಿ, 300 ಏರ್‌ಗನ್‌ ಪೆಲ್ಲೆಟ್ಸ್‌ ಮತ್ತು ಭಾರೀ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ದಾಳಿ ಸ್ಥಳದಲ್ಲಿ ಪಿಎಫ್‌ಎ ಮತ್ತು ಎಸ್‌ಡಿಪಿಐ ಸಂಘಟನೆಗೆ ಸೇರಿದ ಕರಪತ್ರಗಳೂ ಸಿಕ್ಕಿವೆ.

ಲಂಕಾ ಸ್ಫೋಟದಲ್ಲಿ ನಟ ಗಣೇಶ್ ಸ್ನೇಹಿತ ನಿಧನ

Follow Us:
Download App:
  • android
  • ios