ಲಂಕಾ ಸ್ಫೋಟದಲ್ಲಿ ನಟ ಗಣೇಶ್ ಸ್ನೇಹಿತರ ದುರ್ಮರಣ

ಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 300 ಕ್ಕೂ ಹೆಚ್ಚು ಮಂದಿ ದುರ್ಮರಣವನ್ನಪ್ಪಿದ್ದಾರೆ. ನಟ ಗಣೇಶ್ ಸ್ನೇಹಿತರಾದ ಮರೀಗೌಡ ಹಾಗೂ ಪುಟ್ಟರಾಜು ಮೃತಪಟ್ಟಿದ್ದಾರೆ. 

Actor Ganesh friends died in Srilanka Bomb blast

ಶ್ರೀಲಂಕಾದ ಕೊಲಂಬೋದಲ್ಲಿ 300 ಕ್ಕೂ ಹೆಚ್ಚು ಮಂದಿ ಮರಣ ಹೊಂದಿದ್ದಾರೆ. 

ಲಂಕಾ ಸ್ಫೋಟದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸ್ನೇಹಿತರು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟಿರುವ  ಪುಟ್ಟರಾಜು ಹಾಗೂ ಮರೀಗೌಡ ಗಣೇಶ್ ಆತ್ಮೀಯ ಸ್ನೇಹಿತರು. 

 

‘ ನೀವು ನಮ್ಮನ್ನಗಲಿದ್ದೀರಾ ಎಂದರೆ ನಂಬಲಾಗುತ್ತಿಲ್ಲ. ನನಗಾಗುತ್ತಿರುವ ನೋವನ್ನು, ದುಃಖವನ್ನು ಹೇಳಲು ನನ್ನಲ್ಲಿ ಪದಗಳಿಲ್ಲ. ನನ್ನ ಪ್ರೀತಿಯ ಸ್ನೇಹಿತರಾದ ಪುಟ್ಟರಾಜು, ಮರೀಗೌಡ ನಿಮ್ಮಿಬ್ಬರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ‘ ಎಂದು ಕೊಲಂಬೋ ಉಗ್ರ ದಾಳಿಯಲ್ಲಿ ಮೃತಪಟ್ಟವರಿಗೆಲ್ಲಾ ಸಂತಾಪ ಸೂಚಿಸಿದ್ದಾರೆ. 

ಶ್ರೀಲಂಕಾದ ಸಿನ್ನಮೋನ್ ಗ್ರಾಂಡ್ ಹೊಟೇಲ್ ನಲ್ಲಿದ್ದ ನಟಿ ರಾಧಿಕಾ ಶರತ್ ಕುಮಾರ್ ಹಾಗೂ ಕನ್ನಡದ ನಿರ್ಮಾಪಕ ಸಿ ಆರ್ ಮನೋಹರ್ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಈ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ. 

Latest Videos
Follow Us:
Download App:
  • android
  • ios