ಆದರೆ ಇತ್ತೀಚೆಗೆ ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಎಸಿಬಿ ದಾಳಿಗಳಲ್ಲಿ ಹೆಚ್.ಸಿ. ಮಹದೇವಪ್ಪ ಆಪ್ತರೇ ಸಿಕ್ಕಿಬಿದ್ದಿರುವುದರಿಂದ ಮುಂದೆ ಹೆಚ್.ಸಿ. ಮಹದೇವಪ್ಪ ಅವರಿಗೂ ಕಳಂಕ ಅಂಟಿಕೊಳ್ಳುವುದರ ಬಗ್ಗೆ ಕಾಂಗ್ರೆಸ್‌'ಗೆ ಸುಳಿವು ಸಿಕ್ಕಂತಿದೆ.

ಬೆಂಗಳೂರು (ಡಿ.20): ಈಗಾಗಲೇ ಕಾಳಧನ ಹಾಗೂ ಅಕ್ರಮ ಆಸ್ತಿಯ ಸಂಕೋಲೆಗೆ ಸಿಲುಕುವ ಹೆದರಿಕೆಯಲ್ಲಿರುವ ಕಾಂಗ್ರೆಸ್ ಕೆಲ ಸಚಿವರಿಂದಾಗಿ ಕೈ ಕೈ ಹಿಚುಕಿಕೊಳ್ಳುವಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಕ್ಕೆ ತಕ್ಕ ಉದಾಹರಣೆ ಎಂದರೆ ಮೈಸೂರಿನ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಲೆಕ್ಕಾಚಾರ ಬದಲಿಸುತ್ತಿರುವುದು. ಈವರೆಗೆ ಹೆಚ್.ಸಿ. ಮಹದೇವಪ್ಪ ಪುತ್ರ ಸುನೀಲ್ ಬೋಸ್‌ನನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಬಿಂಬಿಸಿತ್ತು.

ಆದರೆ ಇತ್ತೀಚೆಗೆ ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಎಸಿಬಿ ದಾಳಿಗಳಲ್ಲಿ ಹೆಚ್.ಸಿ. ಮಹದೇವಪ್ಪ ಆಪ್ತರೇ ಸಿಕ್ಕಿಬಿದ್ದಿರುವುದರಿಂದ ಮುಂದೆ ಹೆಚ್.ಸಿ. ಮಹದೇವಪ್ಪ ಅವರಿಗೂ ಕಳಂಕ ಅಂಟಿಕೊಳ್ಳುವುದರ ಬಗ್ಗೆ ಕಾಂಗ್ರೆಸ್‌'ಗೆ ಸುಳಿವು ಸಿಕ್ಕಂತಿದೆ.

ಹಾಗಾಗಿ ಹೆಚ್.ಸಿ. ಮಹದೇವಪ್ಪ ಪುತ್ರ ಸುನೀಲ್ ಬೋಸ್ ಬದಲಾಗಿ ಚಾಮರಾಜನಗರ ಸಂಸದ ಧ್ರುವನಾರಾಯಣ್ ಅವರನ್ನು ನಂಜನಗೂಡು ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್ ಬಹುತೇಕ ನಿರ್ಧರಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.