ಖ್ಯಾತ ನಟ ಇರ್ಫಾನ್ ಖಾನ್ ನಿಧನ; ಭಾರತದಲ್ಲಿ ಆತಂಕ ಹೆಚ್ಚಿಸಿದ ಕೊರೋನಾ; ಏ.29ರ ಟಾಪ್ 10 ಸುದ್ದಿ!
600 ರೂಪಾಯಿ ಹೊಂದಿಸಲು ಸಾಧ್ಯವಾಗದೇ ನಟ ಇರ್ಫಾನ್ ಖಾನ್ ಕ್ರಿಕೆಟಿನಾಗಬೇಕೆಂಬ ಕನಸನ್ನು ಕೈಬಿಟ್ಟಿದ್ದರು. ಬಳಿಕ ತಂಗಿ ನೀಡಿದ 300 ರೂಪಾಯಿಯಲ್ಲಿ ದೇಶವೇ ಮೆಚ್ಚುವ ಅದ್ಭುತ ನಟನಾಗಿ ಹೊರಹೊಮ್ಮಿದ ಇರ್ಫಾನ್ ಖಾನ್ ಸ್ಟೋರಿ ರೋಚಕ. ಇತ್ತ ದೇಶದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ ಸಾವಿರ ದಾಟಿದೆ. ಇದರ ನಡುವೆ ಲಾಕ್‌ಡೌನ್ ವಿಸ್ತರಣೆ ಅಥವಾ ಅಂತ್ಯ ಈ ಕತೂಹಲಕ್ಕೆ ಮೋದಿ ಉತ್ತರ ನೀಡಲಿದ್ದಾರೆ. ದೇಶದಲ್ಲಿನ ಆರ್ಥಿಕ ಸ್ಥಿತಿಗತಿ, ರಿಶ್ಮಿಕಾ ಮಂದಣ್ಣ ಫೇವರಿಟ್ ನಟ ಸೇರಿದಂತೆ ಏಪ್ರಿಲ್ 29ರ ಟಾಪ್ 10 ಸುದ್ದಿ.
ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್ ನಿಧನ!...
ಕರುಳಿನ ಸೋಂಕು ಕಾಣಿಸಿಕೊಂಡು ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್(54) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕೊಲೊನ್ ಇನ್‌ಫೆಕ್ಷನ್(ಕರುಳಿನ ಸೋಂಕು)ನಿಂದಾಗಿ ಕೋಕಿಲಬೆನ್ ಆಸ್ಪತ್ರೆಗೆ ದಾಖಲಾಗಿದ್ದ ಇರ್ಫಾನ್ ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಭಾರತದಲ್ಲಿ ಸಾವಿರ ದಾಟಿದ ಕೊರೋನಾ ಸಾವು, ನವದೆಹಲಿ ಚಿಂತಾಜನಕ...
ಕೊರೋನಾ ವಿಚಾರದಲ್ಲಿ ಕರ್ನಾಟಕ ಕೊಂಚ ನಿರಾಳವಾಗಿರಬಹುದು. ಆದರೆ ಭಾರತದಲ್ಲಿ ಕೊರೋನಾ ಸಾವಿನ ಸಂಖ್ಯೆ ಸಾವಿರ ದಾಟಿದೆ. ದೇಶದಲ್ಲಿ 31 ಸಾವಿರ ಜನರಿಗೆ ಸೋಂಕಿದೆ. ದೆಹಲಿಯ ಆಸ್ಪತ್ರೆಯ 5 ಸಿಬ್ಬಂದಿಗೂ ಕೊರೋನಾ ಸೋಂಕು ತಗುಲಿದೆ. ನವದೆಹಲಿಯಲ್ಲಿ ಈಗಿರುವ ಪರಿಸ್ಥಿತಿ ಆತಂಕ ಹೆಚ್ಚು ಮಾಡಿದೆ.
ಲಾಕ್‌ಡೌನ್ ವಿಸ್ತರಣೆಯೋ? ಸಡಿಲಿಕೆಯೋ? ಎಲ್ಲರ ಚಿತ್ತ ಮೋದಿಯತ್ತ..!
ಕೊರೋನಾ ಅಟ್ಟಹಾಸದಿಂದ ಎರಡನೇ ಹಂತದ ಲಾಕ್‌ಡೌನ್ ಇದೇ ಮೇ.03ಕ್ಕೆ ಅಂತ್ಯಗೊಳ್ಳಲಿದ್ದು, ಇನ್ನೇನು ಐದು ದಿನಗಳು ಬಾಕಿ ಇವೆ. ಆದ್ರೆ, ಲಾಕ್‌ಡೌನ್ ವಿಸ್ತರಣೆಯೋ? ಅಂತ್ಯವೋ? ಎನ್ನುವುದು ಮಾತ್ರ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಇದರಿಂದ ಸಾರ್ವಜನಿಕರ ಚಿತ್ತ ಮೋದಿ ಮಾತಿನತ್ತ ನೆಟ್ಟಿದೆ.
1500 ಕಿ.ಮೀ. ದೂರ ನಡೆದು ಬಂದ ವ್ಯಕ್ತಿ ಕ್ವಾರಂಟೈನಲ್ಲಿ ಸಾವು!
ಕೊರೋನಾ ವೈರಸ್ ಲಾಕ್‌ಡೌನ್ ಕಾರಣದಿಂದ ದುಡಿಮೆ ಇಲ್ಲದೆ ಕಂಗೆಟ್ಟು ಮುಂಬೈನಿಂದ ಉತ್ತರ ಪ್ರದೇಶದ ಶ್ರಾವಸ್ತಿಗೆ 15 ದಿನಗಳ ಕಾಲ ನಡೆದೇ ಸಾಗಿದ್ದ ಇನ್ಸಾಫ್ ಆಲಿ ಎಂಬಾತ ತನ್ನೂರು ತಲುಪಿ ಕ್ವಾರಂಟೈನ್‌ಗೆ ದಾಖಲಾದ ದಿನವೇ ಆಯಾಸ ಮತ್ತು ನಿರ್ಜಲೀಕರಣದಿಂದ ಮೃತಪಟ್ಟದಾರುಣ ಘಟನೆ ನಡೆದಿದೆ.
600 ರೂಪಾಯಿ ಇಲ್ಲದೆ ಕ್ರಿಕೆಟ್ ಕನಸು ಕೈಬಿಟ್ಟ ಇರ್ಫಾನ್ ಅದ್ಭುತ ನಟನಾಗಿದ್ದೇ ರೋಚಕ!
ಬಾಲಿವುಡ್ ಅದ್ಭುತ ನಟ ಎಂದೇ ಗುರುತಿಸಿಕೊಂಡಿರು ಇರ್ಫಾನ್ ಖಾನ್ ದಿಢೀರ್ ನಿಧನದ ಸುದ್ದಿ ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಇರ್ಫಾನ್ ಅಭಿಮಾನಿಗಳ ಮನದಲ್ಲಿ ಬೇರೂರಿದ್ದರು. ಆದರೆ ಇರ್ಫಾನ್ ಎರಡನೇ ಆಯ್ಕೆ ಸಿನಿಮಾ ಆಗಿತ್ತು. ಮೊದಲ ಆಯ್ಕೆ ಕ್ರಿಕೆಟ್. ಅಂದು ಇರ್ಫಾನ್ ಬಳಿಕ 600 ರೂಪಾಯಿ ಇರುತ್ತಿದ್ದರೆ, ಬಹುಷಃ ಟೀಂ ಇಂಡಿಯಾದ ಶ್ರೇಷ್ಠ ಆಲ್ರೌಂಡರ್ ಅನ್ನೋ ಖ್ಯಾತಿಗೆ ಪಾತ್ರರಾಗುತ್ತಿದ್ದರು.
ದೇಶದ ಶೇ.27 ರಷ್ಟು ಸಣ್ಣ ಕಂಪನಿಗಳ ಬಳಿ ದುಡ್ಡಿಲ್ಲ!...
ಕೊರೋನಾ ವೈರಸ್ ಬಿಕ್ಕಟ್ಟಿನಿಂದ ದೇಶದ ಆರ್ಥಿಕತೆಯ ಬೆನ್ನೆಲುಬಿನಂತಿರುವ ಸಣ್ಣ ಹಾಗೂ ಮಧ್ಯಮ ಗಾತ್ರದ ಕಂಪನಿಗಳು (ಎಸ್‌ಎಂಇ) ಮತ್ತು ಸ್ಟಾರ್ಟಪ್‌ಗಳ ಪೈಕಿ ಶೇ.27ರಷ್ಟುಕಂಪನಿಗಳು ದಿವಾಳಿ ಭೀತಿ ಎದುರಿಸುತ್ತಿವೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ಕಂಪನಿಗಳ ಬಳಿಯಿದ್ದ ಹಣ ಸಂಪೂರ್ಣ ಖಾಲಿಯಾಗಿದ್ದು, ಹೊಸ ಆರ್ಥಿಕ ಮೂಲಗಳೂ ಇವುಗಳಿಗೆ ಇಲ್ಲವಾಗಿವೆ.
ನೆಚ್ಚಿನ ಕಾರು ಬಳಸುವ ಮೊದಲೇ ಇಹಲೋಕ ತ್ಯಜಿಸಿದ ಇರ್ಫಾನ್ ಖಾನ್!
ಹೆಸರು, ಯಶಸ್ಸು, ಆದಾಯ ಇದೆಲ್ಲವನ್ನೂ ಅನುಭವಿಸುವ ಮೊದಲೇ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನರಾಗಿದ್ದಾರೆ. ಬಾಲ್ಯದಿಂದಲೇ ಉತ್ತಮ ಜೀವನಕ್ಕಾಗಿ ಹೋರಾಟ ಮಾಡಿಕೊಂಡ ಬಂದ ಇರ್ಫಾನ್ ಶ್ರೀಮಂತನಾದ ಮೇಲೆ ಆರೋಗ್ಯಕ್ಕಾಗಿ ಹೋರಾಡಬೇಕಾಯಿತು. ಇತ್ತ ತಮಗಿಷ್ಟವಾದ ಕಾರು ಖರೀದಿಸಿದ್ದರೂ ಅದನ್ನೂ ಬಳಸಿ ಆನಂದಿಸುವ ಮೊದಲೇ ಇರ್ಫಾನ್ ಇಹಲೋಕ ತ್ಯಜಿಸಿದ್ದಾರೆ
ತಲೆ ಮರೆಸಿಕೊಂಡಿದ್ದಾಗಲೇ 2 ಮಕ್ಕಳ ತಂದೆಯಾದ ವಿಕಿಲೀಕ್ಸ್ ಸಂಸ್ಥಾಪಕ!...
ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ (48) ಲಂಡನ್ನಿನ ಈಕ್ವೆಡಾರ್ ದೂತಾವಾಸದಲ್ಲಿ ತಲೆಮರೆಸಿಕೊಂಡಿದ್ದಾಗಲೇ ತನ್ನ ವಕೀಲೆ ಜೊತೆ ಸಂಬಂಧ ಬೆಳೆಸಿ ಎರಡು ಮಕ್ಕಳ ತಂದೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಮೂರೇ ವಾರದಲ್ಲಿ ಪಿಎಂ ಮೋದಿ ಅನ್‌ಫಾಲೋ ಮಾಡಿದ ವೈಟ್‌ಹೌಸ್!, ಕಾರಣವೇನು?
ಕೊರೋನಾ ವಿರುದ್ಧದ ಸಮರದಲ್ಲಿ ಪ್ರಮುಖ ಪಾತ್ರ ವಹಿಸುವ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳ ರಫ್ತಿನ ಮೇಲಿನ ನಿರ್ಬಂಧವನ್ನು ಭಾರತ ಹಿಂಪಡೆದ ಬೆನ್ನಲ್ಲೇ ಪಿಎಂ ಮೋದಿ ಟ್ವಿಟರ್ ಖಾತೆ ಫಾಲೋ ಮಾಡಲಾರಂಭಿಸಿದ್ದ, ಅಮೆರಿಕ ಅಧ್ಯಕ್ಷರ ಕಾರ್ಯಾಲಯ ವೈಟ್ ಹೌಸ್ ಈಗ ಮೂರು ವಾರಗಳಲ್ಲೇ ಅನ್ ಫಾಲೋ ಮಾಡಿದೆ.
ಲಾಕ್‌ಡೌನ್ ಟೈಮಲ್ಲಿ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜೊತೆ ಇಂಟರಾಕ್ಷನ್ ನಡೆಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ನಿಮ್ಮ ನೆಚ್ಚಿನ ನಟ ಯಾರು ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ರಶ್ಮಿಕಾ ಕೊಟ್ಟ ಉತ್ತರವಿದು!