ನವದೆಹಲಿ(ಏ.29): ಕೊರೋನಾ ವಿರುದ್ಧದ ಸಮರದಲ್ಲಿ ಪ್ರಮುಖ ಪಾತ್ರ ವಹಿಸುವ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳ ರಫ್ತಿನ ಮೇಲಿನ ನಿರ್ಬಂಧವನ್ನು ಭಾರತ ಹಿಂಪಡೆದ ಬೆನ್ನಲ್ಲೇ ಪಿಎಂ ಮೋದಿ ಟ್ವಿಟರ್ ಖಾತೆ ಫಾಲೋ ಮಾಡಲಾರಂಭಿಸಿದ್ದ, ಅಮೆರಿಕ ಅಧ್ಯಕ್ಷರ ಕಾರ್ಯಾಲಯ ವೈಟ್ ಹೌಸ್ ಈಗ ಮೂರು ವಾರಗಳಲ್ಲೇ ಅನ್‌ ಫಾಲೋ ಮಾಡಿದೆ.

ಹೌದು ವೈಟ್‌ ಹೌಸ್ ಪಿಎಂ ನರೇಂದ್ರ ಮೋದಿ, ಪ್ರಧಾನಿ ಕಾರ್ಯಾಲಯ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರವರ ಟ್ವಿಟರ್ ಖಾತೆ ಸೇರಿ ಒಟ್ಟು ಅಕೌಂಟ್‌ಗಳನ್ನು ಆನ್‌ಫಾಲೋ ಮಾಡಿದೆ. ಆದರೆ ವೈಟ್‌ಹೌಸ್‌ ಹೀಗೆ ಮಾಡಲು ಏನು ಕಾರಣ ಎಂಬುವುದು ಇನ್ನೂ ಬಹಿರಂಗವಾಗಿಲ್ಲ. 

ವರ್ಷಾಂತ್ಯಕ್ಕೆ ಅಮೆರಿಕದಲ್ಲಿ ಇನ್ನೂ ಭೀಕರ ಕೊರೋನಾ ದಾಳಿ: ತಜ್ಞರ ಎಚ್ಚರಿಕೆ!

ಇನ್ನು ಭಾರತ ಅಮೆರಿಕಾ ಕೇಳಿದ್ದ ಮಾತ್ರೆಗಳ ರಫ್ತಿನ ಮೇಲಿದ್ದ ನಿರ್ಬಂಧ ಹಿಂಪಡೆದಿದ್ದ ಬೆನ್ನಲ್ಲೇ ಡೊನಾಲ್ಡ್‌ ಟ್ರಂಪ್ ಭಾರತವನ್ನು ಹಾಡಿ ಹೊಗಳಿದ್ದರು. ಇದಾದ ಬಳಿಕ ಏಪ್ರಿಲ್ 10ರಂದು ಅಮೆರಿಕ ಶ್ವೇತ ಭವನದ ಅಧಿಕೃತ ಟ್ವಿಟರ್ ಖಾತೆಯಿಂದ ಪಿಎಂ ಮೋದಿ ಸೇರಿ ಒಟ್ಟು ಆರು ಅಕೌಂಟ್‌ಗಳನ್ನು ಫಾಲೋ ಮಾಡಲಾರಂಭಿಸಿತ್ತು. ಈ ಮೂಲಕ ಮೋದಿ ಹಾಗೂ ರಾಷ್ಟ್ರಪತಿ ಕೋವಿಂದ್ ಶ್ವೇತ ಭವನ ಫಾಲೋ ಮಾಡುತ್ತಿರುವ ವಿಶ್ವದ ಇತರ ರಾಷ್ಟ್ರದ ನಾಯಕರೆನಿಸಿಕೊಂಡಿದ್ದರು. ಆದರೀಗ ಈ ಎಲ್ಲಾ ಬೆಳವಣಿಗಗಳ ಬೆನ್ನಲ್ಲೇ ಶ್ವೇತ ಭವನ ಫಾಲೋ ಮಾಡುತ್ತಿರುವ ಖಾತೆಗಳ ಸಂಖ್ಯೆ 13ಕ್ಕಿಳಿದಿದೆ

ಪಿಎಂ ಮೋದಿ, ಭಾರತದ ಪ್ರಧಾನಿ ಕಚೇರಿ, ರಾಷ್ಟ್ರಪತಿ ಕೋವಿಂದ್, ರಾಜಭಾವನ ಖಾತೆ ಹೊರತುಪಡಿಸಿ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ಭಾರತದಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯ ಟ್ವಿಟರ್ ಖಾತೆಗಳನ್ನೂ ಶ್ವೇತಭವನ ಅನ್‌ಫಾಲೋ ಮಾಡಿದೆ.