ಈ ಹಿಂದೆ ಅಪೆಕ್ಸ್ ಕೋರ್ಟ್  ಆದೇಶದಂತೆ ಅರ್ಜಿಗಳಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು.

ನವದೆಹಲಿ(ನ.27): ತೃತೀಯ ಲಿಂಗಿಗಳಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಐ ಅರ್‌ಸಿಟಿಸಿಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವಾಗ ಮಹಿಳೆ ಮತ್ತು ಪುರುಷರಿಗೆ ಮಾತ್ರ ಅರ್ಜಿಯಲ್ಲಿ ಅವಕಾಶ ನೀಡಲಾಗಿತ್ತು. ಆದ್ರೆ ಈಗ ಐ.ಆರ್ ಸಿ.ಟಿ.ಸಿಯು ಮುಂಗಡ ಟಿಕೆಟ್ ಹಾಗೂ ಟಿಕೆಟ್ ರದ್ದುಗೊಳಿಸುವ ಅರ್ಜಿಯಲ್ಲಿ ಪುರುಷ ಹಾಗೂ ಮಹಿಳೆಯೊಂದಿಗೆ ತೃತೀಯ ಲಿಂಗಿಯರನ್ನು ಸೇರ್ಪಡೆಗೊಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿಂದೆ ಅಪೆಕ್ಸ್ ಕೋರ್ಟ್ ಆದೇಶದಂತೆ ಅರ್ಜಿಗಳಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಅದರಂತೆ ಇಂದಿನಿಂದ ನೂತನ ಅರ್ಜಿಗಳನ್ನು ಹೊರತರಲಾಗಿದ್ದು, ಅರ್ಜಿಯಲ್ಲಿ ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿ ಎಂಬ ಮೂರು ಲಿಂಗಗಳಿಗೆ ಅವಕಾಶ ನೀಡಲಾಗಿದೆ.