ಇಂಟರ್‌ಪೋಲ್‌ ಭರ್ಜರಿ ಬೇಟೆ: 500 ಟನ್‌ ಅಕ್ರಮ ಔಷಧ ವಶ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Oct 2018, 7:23 AM IST
Interpol seizes 500 tons of illicit drugs in worldwide raids
Highlights

ಅಂತರ್ಜಾಲದಲ್ಲಿ ಅಕ್ರಮ ಔಷಧ ಮಾರಾಟ ಮಾಡುತ್ತಿದ್ದ ಜಾಗತಿಕ ಜಾಲವೊಂದನ್ನ ಇಂಟರ್‌ಪೋಲ್ ತಂಡ ಭೇದಿಸಿದೆ. ನಕಲಿ ನೋವು ನಿವಾಕರ, ಕ್ಯಾನ್ಸರ್ ನಿವಾರಕ ಸೇರಿದಂತೆ 500 ಟನ್ ಅಕ್ರಮ ಔಷಧವನ್ನ ವಶಪಡಿಸಿಕೊಳ್ಳಲಾಗಿದೆ.

ಪ್ಯಾರಿಸ್‌(ಅ.24): ಡಾರ್ಕ್ವೆಬ್‌ ಸೇರಿದಂತೆ ಅಂತರ್ಜಾಲದ ವಿವಿಧ ತಾಣಗಳನ್ನು ಬಳಸಿ ಅಕ್ರಮ ಔಷಧ ಮಾರಾಟ ಮಾಡುತ್ತಿದ್ದ ಬಹುದೊಡ್ಡ ಜಾಗತಿಕ ಜಾಲವೊಂದನ್ನು ಭೇದಿಸುವಲ್ಲಿ ಇಂಟರ್‌ಪೋಲ್‌ ಯಶಸ್ವಿಯಾಗಿದೆ. 116 ದೇಶಗಳಲ್ಲಿ ನಡೆಸಿದ ಸಂಘಟಿತ ದಾಳಿಯಲ್ಲಿ 5 ಲಕ್ಷ ಕೆಜಿಯಷ್ಟು(500 ಟನ್‌) ಅಕ್ರಮ ಔಷಧವನ್ನು ವಶಪಡಿಸಿಕೊಳ್ಳಲಾಗಿದೆ.

ಹೀಗೆ ವಶಪಡಿಸಿಕೊಂಡ ಅಕ್ರಮ ಔಷಧಗಳಲ್ಲಿ ನಕಲಿ ಕ್ಯಾನ್ಸರ್‌ ನಿವಾರಕ ಮಾತ್ರೆಗಳು, ನಕಲಿ ನೋವು ನಿವಾರಕ ಮಾತ್ರೆಗಳು, ಅಕ್ರಮ ವೈದ್ಯಕೀಯ ಸಿರೆಂಜ್‌ಗಳು ಸೇರಿವೆ ಎಂದು ಇಂಟರ್‌ಪೋಲ್‌ ಪೊಲೀಸ್‌ ಸಂಘಟನೆ ಮಂಗಳವಾರ ತಿಳಿಸಿದೆ.

‘ಪಂಗೆಯಾ ಇಲೆವೆನ್‌’ ಎಂಬ ಸಂಕೇತನಾಮ ಬಳಸಿ ಕಾರ್ಯಾಚರಣೆಗೆ ಇಳಿದಿದ್ದ ಇಂಟರ್‌ಪೋಲ್‌ ತಂಡ, ದಾಳಿ ವೇಳೆ ವಿಶ್ವದೆಲ್ಲೆಡೆ 859 ಜನರನ್ನು ಬಂಧಿಸಿದೆ. ಈ ವೇಳೆ ಸುಮಾರು 102 ಕೋಟಿ ರು. ಮೌಲ್ಯದ ಸಂಭಾವ್ಯ ಹಾನಿಕಾರಕ ಅಕ್ರಮ ಔಷಧಗಳನ್ನು ವಶಪಡಿಸಿಕೊಂಡಿದೆ.

ಅಕ್ರಮ ಔಷಧ ಜಾಲದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳು, ಡಾರ್ಕ್ವೆಬ್‌ ಮತ್ತು ಆನ್‌ಲೈನ್‌ ಮಾರುಕಟ್ಟೆತಾಣಗಳ ಮೇಲೆ ನಿಗಾ ಇಡಲಾಗಿತ್ತು. ಈ ವೇಳೆ ಅಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಖಚಿತಗೊಂಡ ಬಳಿಕ 116 ದೇಶಗಳಲ್ಲಿ ಸಂಘಟಿತ ದಾಳಿ ನಡೆಸುವ ಮೂಲಕ 500 ಟನ್‌ ಅಕ್ರಮ ಔಷಧವನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ಬಳಿಕ ಇಂಥ ಚಟುವಟಿಕೆ ನಡೆಸುತ್ತಿದ್ದ 3671 ವೆಬ್‌ ಲಿಂಕ್‌, ವೆಬ್‌ಸೈಟ್ಸ್‌, ಸಾಮಾಜಿಕ ಜಾಲತಾಣಗಳ ಪುಟಗಳು ಮತ್ತು ಆನ್‌ಲೈನ್‌ ಮಾರುಕಟ್ಟೆತಾಣಗಳನ್ನು ಮುಚ್ಚಲಾಗಿದೆ ಎಂದು ಇಂಟರ್‌ಪೋಲ್‌ ತಿಳಿಸಿದೆ.

loader