ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಾಂಡವವಾಡುತ್ತಿರುವ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವಂಥ ವ್ಯಕ್ತಿಯೊಬ್ಬರು ಬೆಂಗಳೂರಿಗೆ ಅಗತ್ಯವಿದ್ದು, ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರವನ್ನು ಪ್ರಕಾಸ್ ರೈಗೆ ಮೀಸಲಿಡಬೇಕೆಂದು ಚಿಂತಕರು ಆಗ್ರಹಿಸಿದ್ದಾರೆ.

ಪ್ರಕಾಶ್ ರೈಗಾಗಿ ಈ ಕ್ಷೇತ್ರದಿಂದ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಸ್ಪರ್ಧಿಸಬಾರದು, ಎಂದು ಪ್ರಗತಿಪರ ಚಿಂತಕ ಬಾಬು ಅವರು ಅಭಿಪ್ರಾಯಪಟ್ಟಿದ್ದಾರೆ. 

ಪ್ರಕಾಶ್ ರಾಜ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತಿದ್ದಾರೆ. ಅವರಿಗೆ ಬೆಂಬಲ ಸೂಚಿಸಬೇಕು, ಬೆಂಗಳೂರು ಸೆಂಟ್ರಲ್‌ನಲ್ಲಿ ಪ್ರಗತಿಪರ ಚಿಂತಕರು, ಬುದ್ದಿಜೀವಿಗಳಿದ್ದಾರೆ. ಕೆರೆ ಸಮಸ್ಯೆ ಅಥವಾ ಬೆಂಗಳೂರಿನ ಸಮಸ್ಯೆ ಬಗ್ಗೆ ಹೇಳಿದ್ರೆ ಯಾರೂ ಕೇಳಲ್ಲ. ಅವರಿಗೆ ರಾಜಕೀಯ ಪಕ್ಷಗಳೇ ಮುಖ್ಯ. ಪಕ್ಷಗಳು ಹೇಳಿದಂತೆ ಅವರು ಕೇಳಬೇಕಾಗುತ್ತೆ. ಆದ್ದರಿಂದ ನಮಗೆ ಒಬ್ಬ ಸ್ವತಂತ್ರ ಅಭ್ಯರ್ಥಿ ಬೇಕು. ಸ್ವತಂತ್ರವಾಗಿ ಅಭಿಪ್ರಾಯ ಹೇಳುವವರು ಬೇಕು. ಅದು ಪ್ರಕಾಶ್ ರೈ. ಅವರೊಂದಿಗೆ ನಾವು ಚರ್ಚಿಸಿದ್ದೇವೆ. ಆದ್ರಿಂದ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಎಲೆಕ್ಷನ್‌ಗೆ ನಿಲ್ಲದೇ, ಪ್ರಕಾಶ್ ರೈಗೆ ಬಿಟ್ಟು ಕೊಡಬೇಕು, ಎಂದು ಒತ್ತಾಯಿಸಿದ್ದಾರೆ. 

#JustAsking ಎಂಬ ಅಭಿಯಾನದ ಮೂಲಕ ಟ್ವೀಟರ್‌ನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ಸದಾ ಪ್ರಶ್ನಿಸುವ ಪ್ರಕಾಶ್ ರೈ ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. 

ಪ್ರಕಾಶ್ ರೈಗೆ ಕಾಂಗ್ರೆಸ್ ಬೆಂಬಲ?