Asianet Suvarna News Asianet Suvarna News

(ವಿಡಿಯೋ)ಸರ್ಕಾರಿ ಆಸ್ಪತ್ರೆಯಲ್ಲಿ ನರಕ ದರ್ಶನ: ಎಕ್ಸ್ರೇ ರೂಮಿಗೆ ವೃದ್ಧ ಪತಿಯನ್ನು ನೆಲದ ಮೇಲೆ ಎಳೆದೊಯ್ದ ಪತ್ನಿ

ಸ್ಟ್ರೆಚ್ಚರ್​ ಇಲ್ಲದೇ ವೃದ್ಧ ರೋಗಿಯನ್ನು ಅಜ್ಜಿಯೊಬ್ಬಳು ನೆಲದಲ್ಲೇ ಎಳೆದುಕೊಂಡು ಹೋದ ಮನಕಲುಕುವ ಘಟನೆ ಶಿವಮೊಗ್ಗ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

Inhumanity In Shimogga Hospital
  • Facebook
  • Twitter
  • Whatsapp

ಶಿವಮೊಗ್ಗ(ಜೂ.02): ಸ್ಟ್ರೆಚ್ಚರ್​ ಇಲ್ಲದೇ ವೃದ್ಧ ರೋಗಿಯನ್ನು ಅಜ್ಜಿಯೊಬ್ಬಳು ನೆಲದಲ್ಲೇ ಎಳೆದುಕೊಂಡು ಹೋದ ಮನಕಲುಕುವ ಘಟನೆ ಶಿವಮೊಗ್ಗ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದ್ದು  ಸ್ಟ್ರೆಚ್ಚರ್​ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಮಾಜಿ ಸಿಎಂ ಯಡಿಯೂರಪ್ಪನವರ ತವರು ಜಿಲ್ಲೆಯಲ್ಲೇ ಇಂತದ್ದೊಂದು ಅಮಾನವೀಯ ಘಟನೆ ನಡೆದಿದೆ. ಕುರುಬರ ಪಾಳ್ಯದ ಅಮೀರ್​ ಸಾಬ್​ ಕಾಲಿಗೆ ಗಾಯಗೊಂಡಿದ್ದು ಚಿಕಿತ್ಸೆಗೆ ಅಂತ ಆಸ್ಪತ್ರೆಗೆ ಬಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಸ್ಟ್ರೆಚ್ಚರ್​ ಇಲ್ಲದೇ ಇದ್ದುದ್ದರಿಂದ ಪತ್ನಿಯೇ ತನ್ನ ಗಂಡನನ್ನು ಪಕ್ಕದ ವಾರ್ಡ್​ಗೆ ಎಳೆದುಕೊಂಡು ಹೋಗಿದ್ದಾರೆ.

ಇಷ್ಟಾದರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಸ್ಪಂದಿಸಿಲ್ಲ. ಈ ಮನಕಲುಕುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ.

Follow Us:
Download App:
  • android
  • ios