ಜೈಲಲ್ಲಿರುವ ಇಂದ್ರಾಣಿ, ಪೀಟರ್‌ ವಿಚ್ಛೇದನಕ್ಕೆ ಕೋರ್ಟ್‌ ಅನುಮೋದನೆ

ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿಗಳಾಗಿ ಜೈಲಿನಲ್ಲಿದ್ದಾರೆ ಪೀಟರ್‌ ಮುಖರ್ಜಿ ಹಾಗೂ ಅವರ ಪತ್ನಿ ಇಂದ್ರಾಣಿ ಮುಖರ್ಜಿ | ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನಕ್ಕೆ ಅನುಮೋದನೆ 

Indrani Peter Mukherjea Granted divorce by Mumbai court

ನವದೆಹಲಿ (ಅ. 04): ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿಗಳಾಗಿ ಜೈಲಿನಲ್ಲಿರುವ ಮಾಧ್ಯಮ ಉದ್ಯಮಿ ಪೀಟರ್‌ ಮುಖರ್ಜಿ ಹಾಗೂ ಅವರ ಪತ್ನಿ ಇಂದ್ರಾಣಿ ಮುಖರ್ಜಿ ಅವರ ವಿಚ್ಛೇದನಕ್ಕೆ ಕೌಟುಂಬಿಕ ನ್ಯಾಯಾಲಯ ಅನುಮೋದನೆ ನೀಡಿದೆ.

ಜಾಕ್ ಪಾಟ್! ನಿಜಾಮನ 305 ಕೋಟಿ ರೂ 120 ಮಂದಿಗೆ ಹಂಚಿಕೆ

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ದಂಪತಿ ವಿಚ್ಛೇದನಕ್ಕೆ ಪರಸ್ಪರ ಒಪ್ಪಿಗೆಯ ಮೇರೆಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಅಂಗೀಕರಿಸಿದ ಕೋರ್ಟ್‌, ಇಬ್ಬರೂ ತಮ್ಮ ಸ್ಪೇನ್‌, ಲಂಡನ್‌ನಲ್ಲಿರುವ ಆಸ್ತಿ ಸೇರಿದಂತೆ ಠೇವಣಿ ಹಾಗೂ ಬಂಡವಾಳವನ್ನು ಹಂಚಿಕೊಳ್ಳಬೇಕು ಎಂದು ಸೂಚಿಸಿತು.

ಬಲಭಾಗದಲ್ಲಿ ಹೃದಯ, ಎಡಭಾಗದಲ್ಲಿ ಯಕೃತ್; ಇದೆಂಥಾ ವಿಚಿತ್ರ?

2002ರಲ್ಲಿ ಇಂದ್ರಾಣಿ (47) ಹಾಗೂ ಪೀಟರ್‌ (65) ಮದುವೆಯಾಗಿದ್ದರು. 2012ರಲ್ಲಿ ತನ್ನ ಮೊದಲ ಸಂಬಂಧದ ಪುತ್ರಿ ಶೀನಾಳನ್ನು ಇಂದ್ರಾಣಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾಳೆ. ಇದಕ್ಕೆ ಪೀಟರ್‌ ಸಹಕಾರವಿತ್ತು ಎನ್ನಲಾಗಿದೆ.

Latest Videos
Follow Us:
Download App:
  • android
  • ios