ಇಂದಿರಾ ಕ್ಲಿನಿಕ್ ವೇಳಾಪಟ್ಟಿ ಸಮಯದ ಕನ್ನಡ ಬೋರ್ಡ್'ನಲ್ಲಿ ಬೆಳಗ್ಗೆ 9 ರಿಂದ 4 ಗಂಟೆ ಎಂದು ನಮೂದಾಗಿದ್ದರೆ, ಇಂಗ್ಲೀಷ್ ವೇಳಾಪಟ್ಟಿಯಲ್ಲಿ ಬೆಳಗ್ಗೆ 10 ರಿಂದ 5 ಗಂಟೆ ಎಂದು ಬರೆಯಲಾಗಿದೆ.

ಬೆಂಗಳೂರು(ಡಿ.02): ನಗರದ ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್)ದಲ್ಲಿ ಇಂದಿನಿಂದ ಇಂದಿರಾ ಕ್ಲಿನಿಕ್ ಕಾರ್ಯಾರಂಭವಾಗಿದ್ದು, ಬಿಬಿಎಂಪಿ ಮಾಡಿದ ಯಡವಟ್ಟಿನಿಂದಾಗಿ ಆರಂಭದಲ್ಲೇ ಸರ್ಕಾರ ಮುಜುಗರಕ್ಕೀಡಾಗಿದೆ.

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್'ನ ಮುಂದುವರಿದ ಭಾಗವಾಗಿ ಇಂದು ಮೆಜೆಸ್ಟಿಕ್'ನಲ್ಲಿ ಇಂದಿರಾ ಕ್ಲಿನಿಕ್ ಆರಂಭವಾಗಿದ್ದು, ಕ್ಲಿನಿಕ್ ವೇಳಾಪಟ್ಟಿಯಲ್ಲಿ ಯಡವಟ್ಟಾಗಿದೆ. ಇಂಗ್ಲೀಷ್'ನಲ್ಲಿ ಒಂದು ಸಮಯ ನಮೂದಾಗಿದ್ದರೆ, ಕನ್ನಡದಲ್ಲಿ ಮತ್ತೊಂದು ನೀಡಿರುವುದು ಪ್ರಯಾಣಿಕರನ್ನು ಗೊಂದಲಕ್ಕೀಡಾಗುವಂತೆ ಮಾಡಿದೆ.

ಇಂದಿರಾ ಕ್ಲಿನಿಕ್ ವೇಳಾಪಟ್ಟಿ ಸಮಯದ ಕನ್ನಡ ಬೋರ್ಡ್'ನಲ್ಲಿ ಬೆಳಗ್ಗೆ 9 ರಿಂದ 4 ಗಂಟೆ ಎಂದು ನಮೂದಾಗಿದ್ದರೆ, ಇಂಗ್ಲೀಷ್ ವೇಳಾಪಟ್ಟಿಯಲ್ಲಿ ಬೆಳಗ್ಗೆ 10 ರಿಂದ 5 ಗಂಟೆ ಎಂದು ಬರೆಯಲಾಗಿದೆ. ಒಂದೇ ಬೋರ್ಡ್'ನಲ್ಲಿ ಒಂದು ಗಂಟೆ ಸಮಯ ವ್ಯತ್ಯಾಸವಾಗಿರುವುದು ಪ್ರಯಾಣಿಕರಲ್ಲಿ ಗೊಂದಲ ಉಂಟಾಗುವಂತೆ ಮಾಡಿದೆ.