ಮೊದಲ ಖಾಸಗಿ ವಲಯ ನಿರ್ಮಿತ ಐಆರ್’ಎನ್’ಎಸ್’ಎಸ್-1ಎಚ್  ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದ್ದು, ಆದರೆ ವಿಫಲವಾಗಿದೆ. ಉಪಗ್ರಹದ ಬಿಸಿಯಾದ ಹೊರಪದರ ಬೇರ್ಪಡದೇ ಇರುವುದರಿಂದ ಉಡಾವಣೆ ವಿಫಲವಾಗಿದೆ ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.

ನವದೆಹಲಿ (ಆ.31): ಮೊದಲ ಖಾಸಗಿ ವಲಯ ನಿರ್ಮಿತ ಐಆರ್’ಎನ್’ಎಸ್’ಎಸ್-1ಎಚ್ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದ್ದು, ಆದರೆ ವಿಫಲವಾಗಿದೆ. ಉಪಗ್ರಹದ ಬಿಸಿಯಾದ ಹೊರಪದರ ಬೇರ್ಪಡದೇ ಇರುವುದರಿಂದ ಉಡಾವಣೆ ವಿಫಲವಾಗಿದೆ ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಯಾವ ಹಂತದಲ್ಲಿಯೂ ಸಮಸ್ಯೆ ಇರಲಿಲ್ಲ. ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಉಡಾವಣೆ ಸಂದರ್ಭದಲ್ಲಿ ಬಿಸಿಯಾದ ಹೊರಪದರಗಳು ಬೇರ್ಪಡಲೇ ಇಲ್ಲ. ಹಾಗಾಗಿ ಉಪಗ್ರಹ ಕಕ್ಷೆ ಸೇರುವಲ್ಲಿ ವಿಫಲವಾಯಿತು ಎಂದು ಕಿರಣ್ ಕುಮಾರ್ ಹೇಳಿದ್ದಾರೆ.

ಐಆರ್’ಎನ್’ಎಸ್’ಎಸ್-1ಎಚ್ ಉಪಗ್ರಹವನ್ನು ಬೆಂಗಳೂರು ಮೂಲದ ಅಲ್ಫಾ ಡಿಸೈನ್ ಟೆಕ್ನಾಲಜಿ 8 ತಿಂಗಳಿಂದ ತಯಾರು ಮಾಡಿದ್ದು ಉಪಗ್ರಹದ ಒಟ್ಟು ತೂಕ 1425 ಕೆಜಿ ಇದೆ. ಇಸ್ರೋದ 70 ವಿಜ್ಞಾನಿಗಳು ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಉಪಗ್ರಹದ ಉಡಾವಣೆ ದೃಶ್ಯ:-