ನವದೆಹಲಿ[ಜೂ.16]: ಮಧ್ಯಪ್ರದೇಶದ ಇಂದೋರ್‌ನಿಂದ ಸಂಚರಿಸುವ 39 ಮಾರ್ಗದ ರೈಲುಗಳಲ್ಲಿ ಪ್ರಯಾಣಿಕರ ಕಾಲು ಮತ್ತು ತಲೆಗೆ ಮಸಾಜು ಸೇವೆ ಕಲ್ಪಿಸುವ ಪ್ರಸ್ತಾವನೆಗೆ ನಿರ್ಗಮಿತ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಇಂಥ ಪ್ರಸ್ತಾಪವನ್ನೇ ವಾಪಸ್‌ ಪಡೆದಿರುವುದಾಗಿ ಪಶ್ಚಿಮ ರೈಲ್ವೆ ಶನಿವಾರ ಸ್ಪಷ್ಟನೆ ನೀಡಿದೆ.

ರೈಲಿನಲ್ಲಿ ಮಸಾಜ್‌ ಸೇವೆ ಭಾರತೀಯ ಸಂಸ್ಕೃತಿಗೆ ವಿರುದ್ಧ: ಬಿಜೆಪಿ ಸಂಸದ

ಬಸ್ ಬಿಟ್ಟು ನೀ ರೈಲಿಗೆ ಹೋಗುವೆ: ರೈಲುಗಳಲ್ಲಿ ಮಸಾಜ್ ಸೇವೆ!

ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಪಶ್ಚಿಮ ರೈಲ್ವೆ ವಿಭಾಗದ ಮುಖ್ಯ ವಕ್ತಾರ ರವೀಂದರ್‌ ಭಾಕರ್‌, ‘ಪಶ್ಚಿಮ ರೈಲ್ವೆ ವ್ಯಾಪ್ತಿಗೆ ಬರುವ ಇಂದೋರ್‌ ಮೂಲಕ ಸಂಚರಿವ 39 ಮಾರ್ಗದ ರೈಲುಗಳಲ್ಲಿ ಪ್ರಯಾಣಿಕರಿಗೆ ತಲೆ ಮತ್ತು ಕಾಲು ಮಸಾಜು ಮಾಡುವ ಪ್ರಸ್ತಾಪ ಮಾಡಲಾಗಿತ್ತು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಇದನ್ನು ಕೈಬಿಡಲಾಗಿದೆ’ ಎಂದಿದ್ದಾರೆ.