ನವದೆಹಲಿ(ಜೂ.08): ಭಾರತೀಯ ರೈಲ್ವೇ ಇಲಾಖೆ ಇದೇ ಮೊದಲ ಬಾರಿಗೆ ಚಲಿಸುವ ರೈಲಿನಲ್ಲಿ ಪ್ರಯಾಣಿಕರಿಗೆ ಮಸಾಜ್ ಸೇವೆ ಪ್ರಾರಂಭಿಸಿದೆ. 

ರೈಲಿನಲ್ಲಿ ಪ್ರಯಾಣಿಸುವಾಗಲೇ ಪ್ರಯಾಣಿಕರು ಈ ಮಸಾಜ್ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಸದ್ಯ ಇಂದೋರ್'ನಿಂದ ಹೊರಡುವ 39 ರೈಲುಗಳಲ್ಲಿ ಮಸಾಜ್ ಸೌಲಭ್ಯ ಕಲ್ಪಿಸಲಾಗಿದ್ದು, ಮುಂದಿನ ಹಂತದಲ್ಲಿ ಎಲ್ಲ ರೈಲುಗಳಲ್ಲಿ ಮಸಾಜ್ ಸೇವೆ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸೇವೆಯಿಂದ ಇಲಾಖೆಗೆ ವಾರ್ಷಿಕವಾಗಿ 20 ಲಕ್ಷ ರೂ. ಹೆಚ್ಚುವರಿ ಆದಾಯ ಲಭ್ಯವಾಗಲಿದ್ದು, ಸುಮಾರು 20,000 ಮಸಾಜ್ ಸೇವಾಕರ್ತರು ರೈಲ್ವೆ ಟಿಕೆಟ್ ಪಡೆದುಕೊಳ್ಳುವುದರಿಂದ ವಾರ್ಷಿಕ  90 ಲಕ್ಷ ರೂ. ಹೆಚ್ಚುವರಿ ಟಿಕೆಟ್ ಮಾರಾಟವಾಗುವ ನಿರೀಕ್ಷೆ ಇದೆ.  

ಅದರಂತೆ ಪಾದಗಳ ಮಸಾಜ್ ಹಾಗೂ ತಲೆ ಮಸಾಜ್ ಸೇವೆಗೆ100 ರೂ.ದರ ನಿಗದಿಪಡಿಸಲಾಗಿದೆ ಎಂದು ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.