ಈ ನಾಗರಿಕನ ವಿರುದ್ಧ ವಿದೇಶಿ ಕಾಯಿದೆಯ 14ನೇ ವಿಧಿಯಡಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಸಮಾ ಟೀವಿ ವರದಿ ಮಾಡಿದೆ.

ನವದೆಹಲಿ(ಮೇ.21): ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರ ಸೇಡು ತೀರಿಸಿಕೊಳ್ಳಲು ಹೊರಟಂತ್ತಿದೆ. ಪ್ರವಾಸಿ ದಾಖಲೆಗಳು ಸಮರ್ಪಕವಾಗಿಲ್ಲ ಎಂದು ಇಸ್ಲಮಾಬಾದ್'ನ ಎಫ್-8 ಪ್ರದೇಶದಲ್ಲಿ ಭಾರತೀಯ ನಾಗರಿಕನೊಬ್ಬನನ್ನು ಬಂಧಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ನಾಗರಿಕನ ವಿರುದ್ಧ ವಿದೇಶಿ ಕಾಯಿದೆಯ 14ನೇ ವಿಧಿಯಡಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಸಮಾ ಟೀವಿ ವರದಿ ಮಾಡಿದೆ. ಅಂತರ'ರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಜಾಧವ್ ಅವರಿಗೆ ಗಲ್ಲು ಶಿಕ್ಷೆಗೆ ತಡೆ ನೀಡಿದ ಕೆಲವೇ ದಿನಗಳಲ್ಲಿ ಬಂಧಿಸುರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪಾಕಿಸ್ತಾನವೂ ಪುನಃ ವಿಚಾರಣೆಗಾಗಿ ಕೂಡ ತನ್ನ ಕಡೆಯ ವಕೀಲರನ್ನು ಬದಲಾಯಿಸಿ ಅಟಾರ್ನಿ ಜನರಲ್ ಅವರನ್ನು ನೇಮಿಸಿದೆ.