ಶಾಸಕ ಪ್ರದೀಪ್ ಈಶ್ವರ ವಿರುದ್ಧ ಜೆಡಿಎಸ್ ದೂರು ನೀಡಿದ ಬೆನ್ನಲ್ಲೇ ಇದೀಗ ಎನ್‌ಡಿಎ ಮುಖಂಡರು ಸಹ ಚಿಕ್ಕಬಳ್ಳಾಪುರ ಕನ್ನಡ ಭವನದಲ್ಲಿ ನಡೆದ ಗಲಭೆಗೆ ಪ್ರದೀಪ್ ಈಶ್ವರ್ ಅವರೇ ಕಾರಣ ಎಂದು ಎಸ್‌ಪಿಗೆ ಎನ್‌ಡಿಎ ಮುಖಂಡರು ದೂರು ನೀಡಿದ್ದಾರೆ. ಅಷ್ಟಕ್ಕೂ ಕನ್ನಡಭವನದಲ್ಲಿ ನಡೆದಿದ್ದೇನು?
ಚಿಕ್ಕಬಳ್ಳಾಪುರ (ಜೂ.30): ನಾಡಪ್ರಭು ಕೆಂಪೇಗೌಡ ಜಯಂತಿ(Nadaprabhu kempegowda jayanti)ಯಂದು ಶನಿವಾರ ನಗರದ ಕನ್ನಡ ಭವನ(Kannada bhavan)ದಲ್ಲಿ ನಡೆದ ಗಲಭೆಗೆ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಅವರು ಕಾರಣ ಎಂದು ಆರೋಪಿಸಿ ಎನ್‌ಡಿಎ(NDA) ಮಖಂಡರು ಎಸ್ಪಿಗೆ ದೂರು ನೀಡಿದರು.
ನಗರ ಹೊರವಲಯದ ಎಸ್ಪಿ ಕಚೇರಿ ಬಳಿಗೆ ಸೋಮವಾರ ತೆರಳಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ನೇತೃತ್ವದಲ್ಲಿ ಎನ್‌ಡಿಎ ಮುಖಂಡರು ಎಸ್‌ಪಿ ಕುಶಲ್ ಚೌಕ್ಸೆಗೆ ಲಿಖಿತ ದೂರು ನೀಡಿದರು.
ಇದನ್ನೂ ಓದಿ:ಶಾಸಕ ಪ್ರದೀಪ್ ಈಶ್ವರ್ 'ಮೀಸೆ ತಿರುವಿ, ತೊಡೆ ತಟ್ಟಿ ಪ್ರಚೋದನೆ' ಆರೋಪ: ದೂರು ದಾಖಲಿಸಿದ ಜೆಡಿಎಸ್
ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮಾತನಾಡಿ, ಶನಿವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ದಿನಾಚರಣೆ ಕಾರ್ಯಕ್ರಮದಲ್ಲಿ ಅನ್ಯ ವಿಷಯಗಳಿಗೆ ಚಿಕ್ಕಬಳ್ಳಾಪುರ ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಲ್ಲಿ ಸೇರಿದ್ದ ಯುವಕರಿಗೆ ಕಾರ್ಯಕ್ರಮವನ್ನು ವಿಫಲಗೊಳಿಸಬೇಕು ಎಂದು ಹಾಗೂ ಪ್ರಚಾರ ಪ್ರಿಯತೆಗಾಗಿ ಸಮುದಾಯದ ಹುಡುಗರನ್ನು ಪ್ರಚೋಚನೆ ಮಾಡಿದ ಪರಿಣಾಮ ಗಲಭೆಗೆ ಸಂಪೂರ್ಣ ಕಾರಣ ಶಾಸಕ ಪ್ರದೀಪ್ ಈಶ್ವರ್ ಅವರೇ ಆಗಿದ್ದಾರೆ. ಈ ಕೂಡಲೇ ಅವರನ್ನು ಮೊದಲನೇ ಆರೋಪಿಯಾಗಿ ಮಾಡುವ ಮೂಲಕ ಕಾನೂನು ಸಮಾಜದಲ್ಲಿ ಎಲ್ಲರಿಗೂ ಒಂದೇ ಎಂಬುದನ್ನು ಸಾಬೀತು ಮಾಡಬೇಕೆಂದು ಆಗ್ರಹಿಸಿದರು.


