ಭಾರತದ ಮುಸ್ಲಿಮರು ರಾಮನ ವಂಶಜರು

First Published 26, Feb 2018, 7:31 AM IST
Indian Muslims are Descendants of Lord Rama Says Giriraj Sing
Highlights

ಒವೈಸಿ ಅವರಲ್ಲಿ ಜಿನ್ನಾ ಅನುವಂಶೀಯತೆ ಇದೆ. ಆದರೆ ಭಾರತದ ಮುಸ್ಲಿಮರು ರಾಮನ ವಂಶಜರು. ಹೀಗಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮುಖ್ಯ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ.

ನವದೆಹಲಿ: ಒವೈಸಿ ಅವರಲ್ಲಿ ಜಿನ್ನಾ ಅನುವಂಶೀಯತೆ ಇದೆ. ಆದರೆ ಭಾರತದ ಮುಸ್ಲಿಮರು ರಾಮನ ವಂಶಜರು. ಹೀಗಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮುಖ್ಯ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ.

ಅಯೋಧ್ಯೆ ತೀರ್ಪು ತೀರ್ಪು ಮುಸ್ಲಿಮರ ಪರ: ಒವೈಸಿ

ಅಯೋಧ್ಯೆ ವಿವಾದದ ಬಗ್ಗೆ ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿರುವ ಎಐಎಂಐಎಂ ಸಂಘಟನೆ ಮುಖ್ಯಸ್ಥ ಅಸಾಸುದ್ದೀನ್‌ ಓವೈಸಿ, ‘ಬಾಬರಿ ಮಸೀದಿ ಅಯೋಧ್ಯೆಯಲ್ಲೇ ಇರುತ್ತದೆ. ನಾವದನ್ನು ಮತ್ತೊಮ್ಮೆ ಪುನರ್‌ನಿರ್ಮಾಣ ಮಾಡುತ್ತೇವೆ. ಸುಪ್ರೀಂಕೋರ್ಟ್‌ ತೀರ್ಪು ನಮ್ಮ ಪರವಾಗಿಯೇ ಇರುತ್ತದೆ’ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶನಿವಾರ ಮಾತನಾಡಿದ ಓವೈಸಿ, ಕೋರ್ಟ್‌ ನಂಬಿಕೆ ಮೇಲೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಮುಸ್ಲಿಮರು ಆ ಸ್ಥಳವನ್ನು ಬಿಟ್ಟುಕೊಡಲ್ಲ ಎಂದರು.

ಇದೇ ವೇಳೆ ‘ಯಾರು ನಮ್ಮನ್ನು ಪಾಕ್‌ಗೆ ತೆರಳಿ ಎನ್ನುತ್ತಾರೋ ಅವರಿಗೆ ನನ್ನದೊಂದು ಪ್ರಶ್ನೆ. ದೇಶವನ್ನು ಕೊಳ್ಳೆ ಹೊಡೆದ ಹರ್ಷದ್‌ ಮೆಹ್ತಾ, ಕೇತನ್‌ ಪರೇಖ್‌, ನೀರವ್‌ ಮೋದಿ ಮುಸ್ಲಿಮಮರೇ?’ ಎಂದು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

loader